ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ಮೀಟರ್ ದಂಧೆ ವಿರುದ್ಧ ಸಮರ ಸಾರಿದ ಹುಬ್ಬಳ್ಳಿ ಕಮಿಷನರ್ ಶಶಿಕುಮಾರ್ ಅವರು ಒಂದೇ ದಿನ 16 ಪ್ರಕರಣ ಭೇದಿಸಿ 23 ದಂಧೆಕೋರರ ಅರೆಸ್ಟ್ ಮಾಡಿದ್ದಾರೆ.
ಮೀಟರ್ ಬಡ್ಡಿ ದಂಧೆ ವಿರುದ್ದ ಬೆಂಡಿಗೇರಿ, ಕೇಶ್ವಾಪುರ, ವಿದ್ಯಾನಗರ, ಧಾರವಾಡ ಉಪನಗರ, ಕಮರಿಪೇಟ್ ಹಾಗೂ ಹಳೇ ಹುಬ್ಬಳ್ಳಿ ಸೇರಿ ವಿವಿಧ ಠಾಣೆಗಳಲ್ಲಿ 16 ಕೇಸ್ ದಾಖಲಾಗಿದ್ದವು. 1 ಲಕ್ಷ ಸಾಲ ಕೊಟ್ಟು ಚಕ್ರ ಬಡ್ಡಿ ಸೇರಿಸಿ 4-5 ಲಕ್ಷ ಹಣ ವಸೂಲಿ ಮಾಡ್ತಿದ್ದರು. ಇದೀಗ ಬಡ್ಡಿ ಕುಳಗಳಿಗೆ ನಡುಕ ಹುಟ್ಟಿಸಿರುವ ಕಮಿಷನರ್ ಶಶಿಕುಮಾರ್ ಒಂದೇ ದಿನ 16 ಪ್ರಕರಣ ಭೇದಿಸಿ 23 ದಂಧೆಕೋರರ ಅರೆಸ್ಟ್ ಮಾಡಿದ್ದಾರೆ. 16 ಪ್ರಕರಣಗಳಲ್ಲಿ ಒಂದು ಕಾರು, 2 ಬೈಕ್, ಖಾಲಿ ಚೆಕ್, ಬಾಂಡ್ ವಶಕ್ಕೆ ಪಡೆದಿದ್ದಾರೆ.
ಇನ್ನು ವಾರದ ಹಿಂದೆ ಮೀಟರ್ ಬಡ್ಡಿ ಕಿರಿಕ್ಗೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ರು. ಅಷ್ಟೇ ಅಲ್ಲದೆ ಬೆಂಗೇರಿಯ ಚೇತನಾ ಕಾಲೋನಿಯಲ್ಲಿ ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಬಡ್ಡಿ ಕುಳಗಳ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಜನರು ಧೈರ್ಯವಾಗಿ ದೂರು ನೀಡುವಂತೆ ಕಮಿಷನರ್ ದೂರು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ನಾನು ಸಚಿವನಾಗಿ ದಣಿದಿದ್ದೇನೆ, ಇನ್ನೇನಿದ್ರು ಸಿಎಂ ಆಗ್ಬೇಕು – ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಸ್ಫೋಟಕ ಹೇಳಿಕೆ..!