ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರಕ್ಕೆ BJP ಅಭ್ಯರ್ಥಿ ಫಿಕ್ಸ್ ಆಗಿದೆ. ಡಾ.ಕೆ.ಸುಧಾಕರ್ BJPಯಿಂದ ಅಖಾಡಕ್ಕೆ ಧುಮುಕಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದು, ಡಾಕ್ಟರ್ ಸುಧಾಕರ್ ಸ್ಪರ್ಧೆಗೆ ರಾಜ್ಯ, ರಾಷ್ಟ್ರೀಯ ನಾಯಕರ ಅಸ್ತು ಎಂದಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ಟೀಂ ಮೂರು ಸರ್ವೆ ಮಾಡಿಸಿದೆ. ಮೂರು ಸರ್ವೆಗಳಲ್ಲೂ ಜನರು ಸುಧಾಕರ್ಗೆ ಜೈ ಎಂದಿದ್ದಾರೆ. ಎರಡು ಬಾರಿ ಚಿಕ್ಕಬಳ್ಳಾಪುರ ವಿಧಾನಸಭೆ ಎಲೆಕ್ಷನ್ನಲ್ಲಿ ಡಾಕ್ಟರ್ ಸುಧಾಕರ್ ಗೆದ್ದಿದ್ರು. ಸುಧಾಕರ್ ಅವರು BSY, ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಹಾಗೆಯೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.
ಬಿಜೆಪಿಗೆ ಬಂದಾಗ ಬೈ ಎಲೆಕ್ಷನ್ನಲ್ಲೂ ಭಾರೀ ಅಂತರದಿಂದ ಗೆದ್ದಿದ್ದರು, ಕಳೆದ ಅಸೆಂಬ್ಲಿ ಎಲೆಕ್ಷನ್ನಲ್ಲಿ ಸುಧಾಕರ್ ಅಚ್ಚರಿ ಸೋಲು ಕಂಡಿದ್ದರು. ಚಿಕ್ಕಬಳ್ಳಾಪುರ ಅಸೆಂಬ್ಲಿ ಕ್ಷೇತ್ರಕ್ಕೆ ಅಭಿವೃದ್ಧಿ ಸುರಿಮಳೆಯನ್ನೇ ಹರಿಸಿದ್ರು. ಡಾ.ಸುಧಾಕರ್ ಸ್ಪರ್ಧೆಗೆ ಕ್ಷೇತ್ರದ ಹಲವು ಮುಖಂಡರೂ ಸಲಹೆ ನೀಡಿದ್ದಾರೆ.
ಡಾಕ್ಟರ್ ಸುಧಾಕರ್ ಸ್ಪರ್ಧಿಸಿದರೆ ಚಿಕ್ಕಬಳ್ಳಾಪುರದಲ್ಲಿ ಗೆಲುವು ಸುಲಭವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಹೇಳಿದ್ದಾರೆ. ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಸೇರಿ 8 ಅಸೆಂಬ್ಲಿ ಕ್ಷೇತ್ರಗಳಿವೆ.
ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಜೆಡಿಎಸ್ ಬಲವೂ ಸಿಕ್ಕರೆ ಗೆಲುವು ನಿಶ್ಚಿತವಾಗಿದೆ. ಡಾ.ಸುಧಾಕರ್ ಸ್ಪರ್ಧೆ ತಿಳಿಯುತ್ತಿದ್ದಂತೆ ಕೇಸರಿ ಕಾರ್ಯಕರ್ತರಲ್ಲೂ ಸಂಭ್ರಮ ಹೆಚ್ಚಾಗಿದೆ.
ಇದನ್ನೂ ಓದಿ : ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ : ಕಾಡಿನಲ್ಲಿ ಸ್ಥಳ ಮಹಜರ್ ಮಾಡಿದ FSL..!