ಕಾಲ್ತುಳಿತ ದುರಂತಕ್ಕೆ 11 ಜನ ಬಲಿ.. ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿಕೆಶಿ!

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಆಚರಣೆಗೆ ಬಂದು 11 ಜನರು ಉಸಿರು ಚೆಲ್ಲಿದ್ದಾರೆ. ಸದ್ಯ ಈ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿನ್ನೆ ಮಧ್ಯಾಹ್ನ ನಡೆದ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಮಕ್ಕಳು, ಚಿಕ್ಕಮಕ್ಕಳು ಉಸಿರಾಡಲು ಆಗದೇ ಜೀವ ಬಿಟ್ಟಿದ್ದಾರೆ. 14, 15 ವರ್ಷದ ಮಕ್ಕಳು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರೋದು ನಾನು ನೋಡಿದೆ. 10 ಜನರನ್ನು ನೋಡಿದ್ದೇನೆ. ಈ ರೀತಿ ಆಗಬಾರದಿತ್ತು. ನನಗೆ ಹೊಟ್ಟೆ ಉರಿಯುತ್ತಿದೆ. ಆ ಮಕ್ಕಳ ತಾಯಂದಿರು ಮಾತನಾಡುತ್ತಿರುವುದು ನನಗೆ ನೋಡಿ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಭಾವುಕರಾದರು.

ಪೊಲೀಸ್ ಕಮಿಷನರ್ ಅವರು ಕೇವಲ 10 ನಿಮಿಷದಲ್ಲಿ ಕ್ಲೋಸ್ ಮಾಡಿಸೋಕೆ ಹೇಳಿದರು. ತಕ್ಷಣ ನಾನು ಈ ಬಗ್ಗೆ ಜಾಗೃತನಾದೆ. ಘಟನೆ ನಡೆದಾಗ ಒಬ್ಬರೋ, ಇಬ್ಬರೋ ಸಾವನ್ನಪ್ಪಿದ್ದಾರೆ. 10 ನಿಮಿಷದಲ್ಲಿ ಮುಗಿಸಲು ಏರ್ಪಾಟು ಮಾಡಿ ಎಂದು ಕಮಿಷನರ್ ಹೇಳಿದ್ದರು. ಕೆಎಸ್​ಸಿಎ ಮ್ಯಾನೇಜ್​ಮೆಂಟ್​​ ಅವರು ಹೋಗೋಕೆ ಆಗುತ್ತಿರಲಿಲ್ಲ. ಅವರನ್ನು ನಾನೇ ಕಾರಲ್ಲಿ ಕೂರಿಸಿಕೊಂಡೇ, ಕೆಎಸ್​ಸಿಎಗೆ ಹೋಗೋ ಪ್ಲಾನ್ ಇರಲಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ : RCB ಸಂಭ್ರಮಾಚರಣೆ – ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಯಾಣಿಕರ ಸಂಚಾರ.. ಎಷ್ಟು ಲಕ್ಷ ಜನ?

Btv Kannada
Author: Btv Kannada

Read More