BDA ಕಮಿಷನರ್ ಆಗಿ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್​​​​ ಅಧಿಕಾರಿ ಮೇಜರ್ ಮಣಿವಣ್ಣನ್ ನೇಮಕ!

ಬೆಂಗಳೂರು : ಹಿರಿಯ ಐಎಎಸ್ ಅಧಿಕಾರಿ ಮೇಜರ್ ಪಿ. ಮಣಿವಣ್ಣನ್ ಅವರನ್ನು ಬಿಡಿಎ ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಮಣಿವಣ್ಣನ್ ಅವರು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವ ಮಣಿವಣ್ಣನ್​ರಿಗೆ ಸರ್ಕಾರ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಬಿಡಿಎ ಕಮಿಷನರ್ ಹುದ್ದೆ ನೀಡಿದೆ.

ಬಿಡಿಯನಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮವನ್ನು ತಡೆಗಟ್ಟಿ, ಹೊಸದಾಗಿ ಬೆಂಗಳೂರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪಿ. ಮಣಿವಣ್ಣನ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಮೇಜರ್ ಪಿ. ಮಣಿವಣ್ಣನ್
ಮೇಜರ್ ಪಿ. ಮಣಿವಣ್ಣನ್

ಹಲವು ಹೊಸತನಗಳನ್ನು ರೂಡಿಸಿಕೊಂಡಿರುವ ಮತ್ತು ದಕ್ಷ ಅಧಿಕಾರಿಯಾಗಿರುವ ಮಣಿವಣ್ಣನ್ ಮುಂದೆ ಹಲವು ಯೋಜನೆಗಳಿವೆ. ನಗರದ ಶಿವರಾಂ ಕಾರಂತ್ ಲೇಔಟ್ ಅಭಿವೃದ್ಧಿಪಡಿಸಿ ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸುವುದು. ಹಾಗೂ ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಹು ಮಹಡಿಗಳ ಕಟ್ಟಡ ನಿರ್ಮಾಣ ಮಾಡಿ ಬಡವರಿಗೆ ಮನೆ ಹಂಚುವ ಕಾರ್ಯ ಮಾಡುವುದು, ಇಂತಹ ಹಲವು ಯೋಜನೆಗಳು ಮಣಿವಣ್ಣನ್ ಅವಧಿಯಲ್ಲಿ ನಡೆಯುವ ಸಾಧ್ಯತೆ ಇದೆ.

ವಿಶೇಷವಾಗಿ ಬಿಡಿಎನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಬ್ರೋಕರ್​ಗಳ ಕಾಟ, ಭೂ ಹಗರಣಗಳನ್ನು ಹತ್ತಿಕ್ಕಲು ಸಿಎಂ ಸಿದ್ದರಾಮಯ್ಯನವರು ಪ್ರಾಮಾಣಿಕ ಹಿರಿಯ ಅಧಿಕಾರಿ ಮಣಿವಣ್ಣನ್​ರವರನ್ನು ನೇಮಿಸಿದ್ದಾರೆ.

ಇದನ್ನೂ ಓದಿ : ಗುಜರಾತ್ ಮಣಿಸಿ ಕ್ವಾಲಿಫೈಯರ್ 2ಕ್ಕೆ ಎಂಟ್ರಿ ಕೊಟ್ಟ ಮುಂಬೈ ಇಂಡಿಯನ್ಸ್!

 

Btv Kannada
Author: Btv Kannada

Read More