ಲಾಂಗ್ ಹಿಡಿದು ರೀಲ್ಸ್ ಮಾಡಿ ಯುವಕರ ಹುಚ್ಚಾಟ – ಐವರು ಅರೆಸ್ಟ್!

ಬೆಳಗಾವಿ : ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡುತ್ತಿದ್ದ ಐವರು ಯುವಕರನ್ನು ಪೋಲಿಸರು ಬಂಧಿಸಿದ್ದಾರೆ. ಮುಗಳಖೋಡ ಗ್ರಾಮದ ಬಸವರಾಜ ಯಡವನ್ನವರ, ಲೋಹಿತ್ ಚೌಡಕ್ಕಿ, ಚೇತನ್ ಕರಿಭೀಮಗೋಳ, ಪರಶುರಾಮ್ ಕಾಕೊಂಡಗೋಳ ಹಾಗೂ ಸಸಾಲಟ್ಟಿ ಗ್ರಾಮದ ಸಿದ್ರಾಮ ಹುಕ್ಕೇರಿ ಬಂಧಿತರು.

ಕೆಲವು ತಿಂಗಳ ಹಿಂದೆ ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಿದ್ದ ಈ ಯುವಕರು, ಅಲ್ಲಿಂದ ಮರಳುವಾಗ ಮಾರಕಾಸ್ತ್ರಗಳನ್ನು ಖರೀದಿಸಿದ್ದರು. ಬಳಿಕ ಲಾಂಗ್ ಹಿಡಿದು ಪೋಸ್ ನೀಡಿದ್ದ ಫೋಟೋ ವಾಟ್ಸ್ ಆಯಪ್ ಸ್ಟೇಟಸ್​ನಲ್ಲಿ ಹಾಕಿಸಿಕೊಂಡಿದ್ದರು. ರೀಲ್ಸ್ ಮಾಡುವ ಹುಚ್ಚಾಟದಿಂದಾಗಿ ಇದೀಗ ಈ ಯುವಕರು ಕಂಬಿ ಎಣಿಸುತ್ತಿದ್ದಾರೆ. ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸಪ್ತ ಸಾಗರದಾಚೆಗೂ ಕನ್ನಡದ ಕಂಪು.. ಅಮೆರಿಕದ ಪ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ!

Btv Kannada
Author: Btv Kannada

Read More