‘ಕುರುಡು ಕಾಂಚಾಣ’ ಚಿತ್ರದ ಫಸ್ಟ್​​ಲುಕ್ ಬಿಡುಗಡೆಗೊಳಿಸಿದ ರಾಕ್ ಸ್ಟಾರ್ ರೋಹಿತ್!

ವಿ.ಟಾಕೀಸ್ ಲಾಂಛನದಲ್ಲಿ ಅರುಣ್ ಕುಮಾರ್ ಜೆ ಹಾಗೂ ಡಾ||ಶ್ರೇಯಸ್ ಎಸ್ ನಿರ್ಮಿಸಿರುವ, ಕೆ.ಎಸ್ ಮಂಜುನಾಥ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಹಾಗೂ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿರುವ ಎಸ್.ಪ್ರದೀಪ್ ವರ್ಮ ನಿರ್ದೇಶನದ “ಕುರುಡು ಕಾಂಚಾಣ” ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ, ನಿರ್ದೇಶಕ, ರಾಕ್ ಸ್ಟಾರ್ ರೋಹಿತ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರೈಸಿರುವ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಕುರುಡು ಕಾಂಚಾಣ” ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಬೆಂಗಳೂರು, ಕುಣಿಗಲ್, ಚಿಕ್ಕಮಗಳೂರು, ವರ್ಕಳ ಹಾಗೂ ವೈನಾಡ್ ನಲ್ಲಿ ಚಿತ್ರೀಕರಣ ನಡೆದಿದೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಎಚ್ ಗೀತಾ ಕೈವಾರ ಸಂಗೀತ ನೀಡಿದ್ದಾರೆ‌. ವಿ.ಮನೋಹರ್, ವರದರಾಜ್ ಚಿಕ್ಕಬಳ್ಳಾಪುರ, ಅರ್ಚನಾ ಮರವಂತೆ ಹಾಡುಗಳನ್ನು ಬರೆದಿದ್ದಾರೆ.

ಹಿನ್ನೆಲೆ ಸಂಗೀತವನ್ನು ನಿರ್ದೇಶಕ ಪ್ರದೀಪ್ ವರ್ಮ ಅವರೆ ನೀಡಿದ್ದಾರೆ. ಪ್ರವೀಣ್ ಶೆಟ್ಟಿ & ಗೌತಮ್ ಮಟ್ಟಿ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿರಣ್ ರಾಜ್, ಎಸ್ ಪ್ರದೀಪ್ ವರ್ಮ, ಅಮೂಲ್ಯ ಗೌಡ, ಸಾಕ್ಷಿ ಮೇಘನಾ, ರೆಮೋ(ರೇಖಾ), ನಾಗೇಂದ್ರ ಅರಸ್ ಮುಂತಾದವರಿದ್ದಾರೆ.

ಇದನ್ನೂ ಓದಿ : ಬಾಲಾಜಿ ಕಾವೇರಿ ಪವರ್​ ಪ್ರೈ.ಲಿ.ಗೆ ಕಾನೂನು ಬಾಹಿರವಾಗಿ ಜಲ ವಿದ್ಯುತ್​​​ ಯೋಜನೆ ಗುತ್ತಿಗೆ – ಅರಣ್ಯಾಧಿಕಾರಿ ಚಕ್ರಪಾಣಿ ವಿರುದ್ಧ ಕ್ರಮಕ್ಕೆ ದಿನೇಶ್ ಕಲ್ಲಹಳ್ಳಿ ಆಗ್ರಹ!

Btv Kannada
Author: Btv Kannada

Read More