‘ಆಪರೇಷನ್‌ ಸಿಂಧೂರ’ಕ್ಕೆ ಉಗ್ರ ಮಸೂದ್ ಅಜರ್ ಕುಟುಂಬದ 14 ಮಂದಿ ಬಲಿ!

ಬೆಂಗಳೂರು : ಪಹಲ್ಗಾಮ್​ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಜೈಶ್ ಭಯೋತ್ಪಾದಕ ಹಫೀಜ್ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸಾವನ್ನಪ್ಪಿದ್ದಾರೆ.

ಭಾರತ ನಡೆಸಿದ ಏರ್ ಸ್ಟ್ರೈಕ್​ನಲ್ಲಿ ಬಹಾವಲ್ಪುರ್ ಗುರಿಯಾಗಿಸಿಕೊಂಡ ಭಾರತ ನಡೆಸಿದ ದಾಳಿಯಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಬಾವ ಸೇರಿದಂತೆ 14 ಜನರು ಹತ್ಯೆಯಾಗಿದ್ದಾರೆ. ತನ್ನ ಕುಟುಂಬದ 14 ಮಂದಿ ಮೃತಪಟ್ಟಿದ್ದಾರೆ ಎಂದು ಮಸೂದ್ ಅಜರ್ ತಿಳಿಸಿದ್ದಾನೆ.

ಮಸೂದ್ ಅಜರ್ 2001ರ ಭಾರತದ ಪಾರ್ಲಿಮೆಂಟ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಕಂದಹಾರ್ ವಿಮಾನ ಹೈಜಾಕ್ ವೇಳೆ ಮಸೂದ್ ಅಜರ್ ಬಿಡುಗಡೆಯಾಗಿದ್ದ. ಬಳಿಕ ಪಾಕ್‌ಗೆ ಹೋಗಿ ಜೈಷ್ ಇ ಮೊಹಮ್ಮದ್ ಸಂಘಟನೆ ಕಟ್ಟಿದ್ದ. ಇದೇ ಸಂಘಟನೆಯ ಉಗ್ರರು 2001ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ರು. ಭಾರತದ ಮೋಸ್ಚ್ ವಾಂಟೆಂಡ್ ಉಗ್ರಗಾಮಿಗಳಲ್ಲಿ ಮಸೂದ್ ಅಜರ್ ಪ್ರಮುಖನಾಗಿದ್ದ. ಈಗ ಮಸೂದ್ ಅಜರ್ ಕುಟುಂಬವನ್ನು ಭಾರತದ ಪಡೆಗಳು ಹೊಡೆದುರುಳಿಸಿವೆ.

ಏಪ್ರಿಲ್ 22ರಂದು ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತದ ಹಿಂದೂ ನಾಗರಿಕರೂ ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಎರಡರಲ್ಲೂ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ : ಯೋಧರಿಗೆ ಮೋದಿ ಆತ್ಮಸ್ಥೈರ್ಯ.. ಯುದ್ಧ ಸನ್ನಿವೇಶದಲ್ಲಿ ಕಾಂಗ್ರೆಸ್​ ಸಾಥ್ ಕೊಡ್ಬೇಕು – ವಿಜಯೇಂದ್ರ ಆಗ್ರಹ!

Btv Kannada
Author: Btv Kannada

Read More