ಕೋಲಾರ : ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಹಿನ್ನಲೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವದಲ್ಲಿ ಕೋಲಾರದ ಶಕ್ತಿ ದೇವತೆ ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಬಳಿಕ ಬಿ.ವೈ ವಿಜಯೇಂದ್ರ `ಆಪರೇಷನ್ ಸಿಂಧೂರ’ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೋದಿಯವರ ದಿಟ್ಟ ನಾಯಕತ್ವದಿಂದ ನಮ್ಮ ದೇಶದ ಯೋಧರಿಗೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಹಾಗಾಗಿ ಇಂದು ಯೋಧರು ನಿರ್ಭೀತಿಯಿಂದ ಉಗ್ರರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ಗೆ ಒಂದು ಎಚ್ಚರಿಕೆ ಕೊಡುತ್ತೇನೆ. ಯುದ್ದದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಡಾಗಿ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ನವರು ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಬಾರದು. ದೇಶದ ಪರ ಗಟ್ಟಿಯಾಗಿ ನಿಲ್ಲಬೇಕು ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ನಮ್ಮ ಯೋಧರು ಪಾಕಿಸ್ತಾನದ ವಿರುದ್ಧ ಹೋರಾಟ ಆರಂಭಿಸಿದ್ದು, ಈ ಯುದ್ಧದಲ್ಲಿ ಭಾರತಕ್ಕೆ ವಿಜಯ ಸಿಗಬೇಕು. ಉಗ್ರರು ಇಡೀ ಜಗತ್ತಿಗೆ ಮಾರಕವಾಗಿ ರಕ್ತದೋಕುಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರವನ್ನು ಮೋದಿಯವರು ತೆಗೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ : IPS ಅಧಿಕಾರಿ ಪ್ರವೀಣ್ ಸೂದ್ ಅಧಿಕಾರವಧಿ 1 ವರ್ಷ ವಿಸ್ತರಣೆ – ಸಿಬಿಐ ನಿರ್ದೇಶಕರಾಗಿ ನೇಮಕ!
