ಬೆಂಗಳೂರು : ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಿ ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಸಲಾಗಿದೆ.
IPS ಅಧಿಕಾರಿ ಪ್ರವೀಣ್ ಸೂದ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರವೀಣ್ ಸೂದ್ ಅವರು ಕರ್ನಾಟಕ ಕೇಡರ್‌ನ 1986 ಬ್ಯಾಚ್‌ನ ಐಪಿಎಸ್ ಅಧಿಕಾರಿ.
ಪ್ರವೀಣ್ ಸೂದ್ 22ನೇ ವಯಸ್ಸಿನಲ್ಲಿ UPSC ತೇರ್ಗಡೆಯಾದರು. ನಂತರ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಎಸ್ಪಿಯಾಗಿದ್ದರು. ಇದೇ ವೇಳೆ ಅವರು ಬೆಂಗಳೂರಿನ ಡಿಸಿಪಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ.
ಜೂನ್ 2020 ರಲ್ಲಿ ಪ್ರವೀಣ್ ಸೂದ್ ಅವರನ್ನು ಕರ್ನಾಟಕದ ಡಿಜಿಪಿ ಮಾಡಲಾಯಿತು. ಇದೀಗ ಪ್ರವೀಣ್ ಸೂದ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಿ ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಸಲಾಗಿದೆ. ಪ್ರವೀಣ್ ಸೂದ್ ಅವರು 1996 ರಲ್ಲಿ ಮುಖ್ಯಮಂತ್ರಿಯಿಂದ ಚಿನ್ನದ ಪದಕವನ್ನು ಪಡೆದರು. 2002 ರಲ್ಲಿ ಪೊಲೀಸ್ ಪದಕ ಮತ್ತು 2011 ರಲ್ಲಿ ರಾಷ್ಟ್ರಪತಿಗಳಿಂದ ವಿಶಿಷ್ಟ ಸೇವೆಗಾಗಿ ಪೊಲೀಸ್ ಪದಕ ಪಡೆದಿದ್ದಾರೆ.
ಇದನ್ನೂ ಓದಿ : ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ – ಆಪರೇಷನ್ ಸಿಂಧೂರ ಬಗ್ಗೆ ಪ್ರಧಾನಿ ಮೋದಿ ಫಸ್ಟ್ ರಿಯಾಕ್ಷನ್!
