ಭಾರತದ ದಾಳಿ ಭೀತಿಗೆ ಬೆದರಿ ಬಿಲ ಸೇರಿದ ಪಾಕ್ ಆರ್ಮಿ ಚೀಫ್ – ಕುಟುಂಬ ಸಮೇತ ಪಾಕಿಸ್ತಾನ ಬಿಟ್ಟು ಓಡಿ ಹೋದ್ರಾ ಆಸೀಂ ಮುನೀರ್?

ಇಸ್ಲಾಮಾಬಾದ್ : ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಭಾರತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತ ಭಾರತದ ನಿರ್ಧಾರಗಳಿಂದ ಕಂಗಾಲು ಆಗಿರುವ ಭಿಕ್ಷುಕ ಪಾಕಿಸ್ತಾನ ತಮ್ಮ ಮೊಂಡಾಟವನ್ನು ಮುಂದುವರಿಸಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಪಾಕಿಸ್ತಾನದ ಆರ್ಮಿ ಚೀಫ್ ಜನರಲ್ ಆಸೀಂ ಮುನೀರ್ ಕುಟುಂಬ ಸಮೇತ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಕೆಲ ವರದಿಗಳ ಪ್ರಕಾರ, ಆಸೀಂ ಮುನೀರ್ ತನ್ನ ಕುಟುಂಬವನ್ನು ಪ್ರೈವೇಟ್ ಏರ್‌ಕ್ರಾಫ್ಟ್ ಮೂಲಕ ಬ್ರಿಟನ್ ಅಥವಾ ನ್ಯೂ ಜರ್ಸಿಗೆ ಕಳುಹಿರುವ ಬಗ್ಗೆ ವರದಿಯಾಗಿದೆ.

ಪಹಲ್ಗಾಮ್ ದಾಳಿ ನಡೆದ 48 ಗಂಟೆಯಲ್ಲಿಯೇ ಭಾರತ ಯುದ್ಧನೌಕೆ ಐಎನ್‌ಎಸ್ ಸೂರತ್‌ನಿಂದ ಕ್ಷಿಪಣಿ ಪರೀಕ್ಷೆಯನ್ನು ನಡೆಸುವ ಮೂಲಕ ಅರೇಬಿಯನ್ ಸಮುದ್ರದಲ್ಲಿರುವ ಶತ್ರುಗಳಿಗೆ ಖಡಕ್ ಸಂದೇಶವನ್ನು ರವಾನಿಸಿತ್ತು. ಭಾರತೀಯ ನೌಕಾಪಡೆಯ ಯುದ್ಧನೌಕೆಯು ಕ್ಷಿಪಣಿಯ ಮೂಲಕ ಸಮುದ್ರದಲ್ಲಿನ ಗುರಿಯನ್ನು ನಾಶಪಡಿಸಿತ್ತು. ಇದೀಗ ಆಸೀಂ ಮುನೀರ್ ನಾಪತ್ತೆಯಾಗಿರುವ ಬಗ್ಗೆ ವರದಿಗಳು ಬರುತ್ತಿವೆ.

2 ದಿನದ ಹಿಂದೆ ಪಾಕ್ ಜನತೆ ಮುನೀರ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ತಣ್ಣಗಿದ್ದ ಭಾರತವನ್ನು ಕೆಣಕಿದ್ದೇ ಆಸೀಂ ಮುನೀರ್ ಎಂದು ಪಾಕ್​ ಜನರು ಆಕ್ರೋಶ ಹೊರಹಾಕಿದ್ದರು. ಇದೀಗ ಭಾರತದ ದಾಳಿ ಭೀತಿಗೆ ಬೆದರಿ ಕುಟುಂಬ ಸಮೇತ ಪಾಕಿಸ್ತಾನ ಬಿಟ್ಟೇ ಆಸೀಂ ಮುನೀರ್ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಕೋಲಾರದಲ್ಲಿ 3 ಕಾರುಗಳ ಮಧ್ಯೆ ಭೀಕರ ಸರಣಿ ಅಪಘಾತ – ಓರ್ವ ಸಾವು.. ಐವರಿಗೆ ಗಾಯ!

Btv Kannada
Author: Btv Kannada

Read More