ಚಿತ್ರದುರ್ಗ : ಮದುವೆ ಮಾಡಲಿಲ್ಲ ಎಂದು ಕಿರಾತಕನೋರ್ವ ತಂದೆಯನ್ನೇ ಕೊಂದಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ. ಸಣ್ಣ ನಿಂಗಪ್ಪ ಮೃತ ದುರ್ದೈವಿ.
ಲಿಂಗರಾಜ್ ಎಂಬಾತನಿಗೆ ವಯಸ್ಸಾಗಿದ್ದು, ಮದುವೆ ಮಾಡುವಂತೆ ಪಟ್ಟು ಹಿಡಿದಿದ್ದ. ಇದರ ಜೊತೆ ತಂದೆ ಮನೆಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಮಗ ಕೋಪಗೊಂಡಿದ್ದ. ಈ ಎರಡೂ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ತಾರಕಕ್ಕೇರಿ ಲಿಂಗರಾಜ್ ಕಬ್ಬಿಣದ ರಾಡಿನಿಂದ ತಂದೆ ತಲೆಗೆ ಹೊಡೆದು ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅಡ್ರೆಸ್ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನ – ಇಬ್ಬರು ಖದೀಮರು ಪೊಲೀಸರ ವಶಕ್ಕೆ!
Author: Btv Kannada
Post Views: 278







