ಬೆಂಗಳೂರು : ಹೊಸ ವರ್ಷದ ಹೊತ್ತಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, 23 ಎಸ್ಪಿಗಳಿಗೆ DIGಯಾಗಿ ಬಡ್ತಿ ಜೊತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

DIG ಸಿಐಡಿಯಾಗಿ ಭೀಮಾಶಂಕರ್ ಗುಳೇದ್ ಅವರನ್ನು ವರ್ಗಾವಣೆ ಮಾಡಿದ್ದು, ಸ್ಟೇಟ್ ಇಂಟಲಿಜೆನ್ಸ್ DIG ಆಗಿ ವೇದಮೂರ್ತಿ ಟ್ರಾನ್ಸ್ಫರ್ ಮಾಡಿದ್ದಾರೆ. ಕೆ.ಎಂ ಶಾಂತರಾಜು, DIG, ISD, ಹನುಮಂತರಾಯ, DIG, SHRC, ಕರ್ನಾಟಕ ಲೋಕಾಯುಕ್ತ DIG ಆಗಿ ಸಿರಿಗೌರಿ, ಸಿ.ಕೆ ಬಾಬಾ, DIG, KSRP, ಅಬ್ದುಲ್ ಅಹದ್, ನಿರ್ದೇಶಕರು BMTC, ಎಸ್. ಗಿರೀಶ್, DIG, ANTF,
ಜಿನೇಂದ್ರ ಕಣಗಾವಿ, DIG ಬಂಧಿಖಾನೆ ಹಾಗೂ ಕಲಾ ಕೃಷ್ಣಮೂರ್ತಿ, ಕ್ರೈಂ DIG ಯಾಗಿ ಟ್ರಾನ್ಸ್ಫರ್ ಆಗಿದ್ದಾರೆ. ಒಟ್ಟು 23 IPS ಗಳು ಪದೋನ್ನತಿಯ ಜೊತೆ ವರ್ಗಾವಣೆ ಮಾಡಲಾಗಿದೆ.


ವರ್ಗಾವಣೆಗೊಂಡ ಪ್ರಮುಖ ಅಧಿಕಾರಿಗಳು.
-
ಭೀಮಾಶಂಕರ್ ಗುಳೇದ್: ಡಿಐಜಿ, ಸಿಐಡಿ
-
ವೇದಮೂರ್ತಿ: ಡಿಐಜಿ, ರಾಜ್ಯ ಗುಪ್ತದಳ
-
ಸಿ.ಕೆ. ಬಾಬಾ: ಡಿಐಜಿ, ಕೆಎಸ್‌ಆರ್‌ಪಿ
-
ಅಬ್ದುಲ್ ಅಹದ್: ನಿರ್ದೇಶಕರು, ಬಿಎಂಟಿಸಿ (ಜಾಗೃತ ದಳ)
-
ಸಿರಿಗೌರಿ: ಡಿಐಜಿ, ಲೋಕಾಯುಕ್ತ
-
ಕೆ.ಎಂ. ಶಾಂತರಾಜು: ಡಿಐಜಿ, ಆಂತರಿಕ ಭದ್ರತಾ ವಿಭಾಗ (ISD)
-
ಹನುಮಂತರಾಯ: ಡಿಐಜಿ, ಮಾನವ ಹಕ್ಕುಗಳ ಆಯೋಗ
-
ಎಸ್. ಗಿರೀಶ್: ಡಿಐಜಿ, ಆ್ಯಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ (ANTF)
-
ಜಿನೇಂದ್ರ ಕಣಗಾವಿ: ಡಿಐಜಿ, ಕಾರಾಗೃಹ ಇಲಾಖೆ
-
ಕಲಾ ಕೃಷ್ಣಮೂರ್ತಿ: ಡಿಐಜಿ, ಅಪರಾಧ ವಿಭಾಗ


ಇದನ್ನೂ ಓದಿ : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ – 23 SPಗಳಿಗೆ DIGಯಾಗಿ ಬಡ್ತಿ ಜೊತೆ ಟ್ರಾನ್ಸ್ಫರ್!







