ಮುಮರೆಡ್ಡಿಕೊಪ್ಪದಲ್ಲಿ ಕಳ್ಳರ ಅಟ್ಟಹಾಸ – ದೇವಿಯ 12 ಗ್ರಾಂ ಚಿನ್ನದ ಪಾದಗಳು ಕಳವು!

ಬಾಗಲಕೋಟೆ : ಬಾದಾಮಿ ತಾಲ್ಲೂಕಿನ ಮುಮರೆಡ್ಡಿಕೊಪ್ಪದಲ್ಲಿ ಕಳ್ಳರು ಸರಣಿ ಕಳ್ಳತನಕ್ಕೆ ಯತ್ನಿಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದಾರೆ. ಮುತ್ತಣ್ಣ ಯರಗೊಪ್ಪ ಎಂಬುವವರ ಮನೆಯ ಜಗುಲಿಯಲ್ಲಿದ್ದ 12 ಗ್ರಾಂ ತೂಕದ ಯಲ್ಲಮ್ಮ ದೇವಿಯ ಬಂಗಾರದ ಪಾದಗಳನ್ನು ಕಳವು ಮಾಡಲಾಗಿದೆ.

ಕಳ್ಳರ ಹಾವಳಿ ಕೇವಲ ಒಂದು ಮನೆಗೆ ಸೀಮಿತವಾಗದೆ, ಗ್ರಾಮದ ದರ್ಗಾದ ಕಾಣಿಕೆ ಪೆಟ್ಟಿಗೆ (ಹುಂಡಿ) ಒಡೆದು ಹಣ ದೋಚಿದ್ದಾರೆ. ಅಲ್ಲದೆ, ಇನ್ನೂ ಐದು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಸರಣಿ ಕಳ್ಳತನದಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ರಾತ್ರಿ ಗಸ್ತು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಬಿಗ್ ರಿಲೀಫ್ – ED ಕೇಸ್​ನಲ್ಲಿ ಜಾಮೀನು ಮಂಜೂರು!

Btv Kannada
Author: Btv Kannada