ಮಂತ್ರಾಲಯದಲ್ಲಿ ಕನ್ನಡ ಮಂತ್ರಕ್ಕೆ ತೆಲುಗಿನವರ ವಿರೋಧ – ರಾಯರ ಮಠದಲ್ಲಿ ಭಾಷಾ ಸಂಘರ್ಷಕ್ಕೆ ಕಾರಣವೇನು?

ಮಂತ್ರಾಲಯ : ರಾಯಚೂರು ಗಡಿಭಾಗದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕನ್ನಡ ಬಳಕೆ ಕುರಿತು ಭಾಷಾ ಸಂಘರ್ಷ ಶುರುವಾಗಿದೆ. ತೆಲುಗು ಭಾಷಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ವಿವಾದ ಭುಗಿಲೆದ್ದಿದೆ.

ಮಠದ ಮುಂಭಾಗದಲ್ಲಿ ರಾಯರ ಪ್ರಸಿದ್ಧ ಸ್ತೋತ್ರವಾದ ”ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ” ಎಂಬ ಶ್ಲೋಕವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಆವರಣದಲ್ಲಿ ಕನ್ನಡದ ಫಲಕಗಳು ಹೆಚ್ಚುತ್ತಿದ್ದು, ಸ್ಥಳೀಯ ತೆಲುಗು ಭಾಷೆಯನ್ನು ಕಡೆಗಣಿಸಲಾಗುತ್ತಿದೆ ಎಂಬುದು ತೆಲುಗು ಭಾಷಿಗರ ಆರೋಪ.

ಕನ್ನಡದಲ್ಲಿ ಮಂತ್ರ, ಭಾಷಾ ಸಂಘರ್ಷ
ಮಠದ ಮುಂಭಾಗದಲ್ಲಿ ”ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ಎಂಬ ರಾಯರ ಸ್ತೋತ್ರದ ಶ್ಲೋಕವನ್ನು ಕನ್ನಡದಲ್ಲಿ ಬರೆಯಲಾಗಿದೆ. ಈ ಕನ್ನಡ ಭಾಷೆಯ ಫಲಕಗಳು ಭಾಷಾ ಸಂಘರ್ಷಕ್ಕೂ ಕಾರಣವಾಗಿದೆ.

ಸೋಶಿಯಲ್​​ ಮೀಡಿಯಾದಲ್ಲಿ ಹೊಸ ಚರ್ಚೆ
ಮಠದಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಿರುವುದಕ್ಕೆ, ಮಂತ್ರಾಲಯದಲ್ಲಿ ಕನ್ನಡ ಬಳಕೆ ವಿರೋಧಿಸಿ ತೆಲುಗು ಭಾಷಿಗರು ಅಸಮಾಧಾನ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್​ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ತೆಲುಗು ಭಾಷೆ ಕೈ ಬಿಟ್ಟಿದ್ದು ಯಾಕೆ?
ಸಾಮಾಜಿಕ ಜಾಲತಾಣದಲ್ಲಿ ಭಾಷೆಯ ವಿಚಾರಕ್ಕೆ ಮಠವನ್ನು ಎಳೆದು ತರುವ ಕೆಲಸವನ್ನ ಕೆಲವರು ಮಾಡ್ತಿದ್ದಾರೆ. ರಾಯಚೂರಿನ ಗಡಿಯಲ್ಲಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಆಂಧ್ರಪ್ರದೇಶದ ಭಾಗವಾಗಿದೆ. ಅಲ್ಲಿ ತೆಲುಗು ಭಾಷೆಯನ್ನು ಸಂಪೂರ್ಣವಾಗಿ ಹೇಗೆ ಕೈ ಬಿಡಬಹುದು..? ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ, ಎಂದು ಪೋಸ್ಟ್ ಮಾಡಿದ್ದು, ಇದನ್ನ ಆಂಧ್ರ ಪ್ರದೇಶ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಟ್ಯಾಗ್ ಮಾಡಲಾಗಿದೆ.

ರಾಯರ ಮಠ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳಿಂದ ಮಾತ್ರವಲ್ಲ ಹಲವು ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಎದ್ದಿರುವ ಈ ಹೊಸ ವಿವಾದ ಭಕ್ತರಲ್ಲಿ ಅನಗತ್ಯ ಗೊಂದಲಕ್ಕೆ ದಾರಿ ಮಾಡಿಕೊಡ್ತಿದೆ. ಈ ಬಗ್ಗೆ ಎರಡೂ ರಾಜ್ಯಗಳ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತೆ ಕಾದು ನೋಡಬೇಕಿದೆ.

Btv Kannada
Author: Btv Kannada