ದೆಹಲಿ : ದೆಹಲಿ ಕರ್ನಾಟಕ ಸಂಘ ಮತ್ತು ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಮೈಸೂರು ಸಂಯುಕ್ತ ಆಶ್ರಯದಲ್ಲಿ ನಾಳೆ ರಾಷ್ಟ್ರಕವಿ ಕುವೆಂಪುರವರ ಜೀವನ ಸಾಧನೆ ಮತ್ತು ಕೊಡುಗೆಗಳ ಕುರಿತು ವಿಚಾರ ಸಂಕೀರ್ಣ ನಡೆಯಲಿದೆ.


ನಾಳೆ ದೆಹಲಿ ಕರ್ನಾಟಕ ಸಂಘದಲ್ಲಿ ಬೆಳಗ್ಗೆ 10:30 ರಿಂದ ವಿಚಾರ ಸಂಕೀರ್ಣ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಶ್ರೀ ಶ್ರೀ ಶಿವಾನುಭವ ಚಾರಮೂರ್ತಿ ಶಿವರುದ್ರ ಮಹಾಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಡಾ, ನಿಚ್ಚಿಲಾನಂದನಾಥ ಮಹಾಸ್ವಾಮಿಜಿಗಳು, ಶ್ರೀ ಶ್ರೀ ಶ್ರೀ ಮುಕ್ತಿದಾನಂದ ಜೀ ಮಹಾರಾಜ್ ಮಹಾಸ್ವಾಮಿಜಿಗಳು, ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಜಿಗಳು ಭಾಗವಹಿಸಲಿದ್ದಾರೆ.

ಹಾಗೆಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಬಿ.ಎಲ್. ಸಂತೋಷ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಗಜೇಂದ್ರ ಸಿಂಗ್ ಶೇಖಾವತ್, ಶೋಭಾ ಕರಂದ್ಲಾಜೆ, ಸಂಸದರಾದ ತೇಜಸ್ವಿ ಸೂರ್ಯ, ಡಾ. ಶ್ರೀ ಮಂಜುನಾಥ್, ಕೃಷ್ಣದತ್ತ ಚಾಮರಾಜ ಯದುವೀರ್ ಒಡಿಯರ್. ಇದಲ್ಲದೆ, ಅನೇಕ ಸಾಹಿತಿಗಳು ಮತ್ತು ಇತರ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ : ದೆಹಲಿ-ಆಗ್ರಾ ಎಕ್ಸ್ಪ್ರೆಸ್ವೇನಲ್ಲಿ ಹಲವು ಬಸ್ಗಳಿಗೆ ಬೆಂಕಿ – ನಾಲ್ವರು ಸಾವು!







