ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ ನಡುಗಿಸಿದೆ. ಈ ಪ್ರಬಲ ಕಂಪನದ ಬೆನ್ನಲ್ಲೇ ಜಪಾನ್ ಹವಾಮಾನ ಸಂಸ್ಥೆಯು ಸುನಾಮಿ ಎಚ್ಚರಿಕೆಯನ್ನು ಕೊಟ್ಟಿದೆ. ಸುಮಾರು ಮೂರು ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಯುಎಸ್‌ಜಿಎಸ್ ಮಾಹಿತಿಯ ಪ್ರಕಾರ, ಭೂಕಂಪದ ತೀವ್ರತೆಯಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಸುಮಾರು 3 ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.
ಜಪಾನ್‌ನ ಉತ್ತರ ಮತ್ತು ಪೂರ್ವ ಭಾಗದ ಕರಾವಳಿ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 11:15 ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ಈ ಹಿನ್ನೆಲೆ, ಹೊಕ್ಕೈಡೊ, ಅಯೋಮೊರಿ ಮತ್ತು ಇವಾಟೆ ಪ್ರಿಫೆಕ್ಚರ್‌ಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಭೂಕಂಪದ ತೀವ್ರತೆಗೆ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಭೂಕಂಪನದ ತೀವ್ರತೆ ಎಷ್ಟಿದೆ ಎನ್ನುವುದು ಕಂಡುಬಂದಿದೆ. ಎರೆಡರಡು ಭಾಗದಲ್ಲಿ ಸಂಭವಿಸಿದ ಕಂಪನದಿಂದ ದೀಪಗಳು, ವಾಹನಗಳು, ಬೆಂಚು ಕುರ್ಚಿಗಳು ಮನೆಯಲ್ಲಿನ ಅಮೂಲ್ಯ ವಸ್ತುಗಳು ಜೋರಾಗಿ ಅಲುಗಾಡುವುದು ಕಂಡುಬಂದಿದೆ. ಜೊತೆಗೆ ಸ್ಥಳೀಯ ಜನರು ಕಿರುಚಾಡುವುದು ವಿಡಿಯೋದಲ್ಲಿದೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಹಸುಗಳ ಕಳ್ಳತನ – ಹಸುವಿನ ಕುತ್ತಿಗೆ ಸೀಳಿದ ದುಷ್ಕರ್ಮಿಗಳು!







