ಬೆಂಗಳೂರು : ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮದುವೆಯ ಅರಿಶಿನ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುದೀಪ್ ಅವರ ಅಕ್ಕನ ಮಗನ ಮದುವೆ ಶ್ರೀಲಂಕಾದಲ್ಲಿ ನಡೆದಿದ್ದು. ಆಪ್ತರು ಹಾಗೂ ಕುಟುಂಬಸ್ಥರ ಮಧ್ಯೆ ಅದ್ಧೂರಿಯಾಗಿ ನಡೆದಿದೆ. ಸೋದರಳಿಯನ ಮದುವೆ ಶಾಸ್ತ್ರದಲ್ಲಿ ಸುದೀಪ್ ಕುಟುಂಬ ಭಾಗಿಯಾಗಿದ್ದು, ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಎಲ್ಲರ ಗಮನ ಸೆಳೆದಿವೆ.

ಅಕ್ಕನ ಮಗನ ಮದುವೆಯಲ್ಲಿ ಪ್ರೀತಿಯ ಮಗಳಿಗೆ ಅರಿಶಿನ ಹಚ್ಚಿರೋ ಸುದೀಪ್ ಕೆನೆ ಬಣ್ಣದ ಟ್ರೆಡಿಷನಲ್ ವೇರ್ನಲ್ಲಿ ಕ್ಯೂಟ್ ಕಾಣಿಸಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ಮುದ್ದಾಗಿ ಕಾಣುತ್ತಿದ್ದ ಕಿಚ್ಚನ ಮಗಳು ಫಂಕ್ಷನ್ ಎಂಜಾಯ್ ಮಾಡಿದ್ದಾರೆ. ಕಿಚ್ಚ ಅವರ ಪತ್ನಿಯೂ ಮಗಳ ಕೆನ್ನೆಗೆ ಅರಶಿನ ಹಚ್ಚಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಸಾನ್ವಿ ಸುದೀಪ್ ಸೆಲೆಬ್ರೇಷನ್ನ ಕೆಲವು ಗ್ಲಿಂಪ್ಸ್ ಹಾಕಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಉದ್ಯಮಿ ಮನೆಯಿಂದ ಕೋಟಿ ಕೋಟಿ ಹಣ ಕಳ್ಳತನ – ಇಬ್ಬರು ಆರೋಪಿಗಳು ಅರೆಸ್ಟ್!







