ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ ಭಾರೀ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹುಲಿಮಂಗಲದ ಪ್ರತಿಷ್ಠಿತ ಎಲಿಗೆನ್ಸ್ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿಯೊಬ್ಬರ ಮನೆಯಿಂದ ಬರೋಬ್ಬರಿ 1.16 ಕೋಟಿ ರೂಪಾಯಿ ನಗದು ಕಳ್ಳತನ ಮಾಡಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀನಿವಾಸ ಮೂರ್ತಿ ಮತ್ತು ಅರುಣ್ ಕುಮಾರ್ ಬಂಧಿತರು.

ನ.8ರಂದು ಆರೋಪಿಗಳು ಸುನೀಲ್ ಕುಮಾರ್ ಎಂಬುವವರ ಫ್ಲಾಟ್ನಲ್ಲಿ 1.16 ಕೋಟಿ ಹಣ ಕದ್ದಿದ್ದರು. ಪ್ರಿಸಮ್ ಸರ್ಫೆಸ್ ಕೋಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹೊಂದಿದ್ದ ಸುನೀಲ್ ಕುಮಾರ್ ತನ್ನ ಉದ್ಯಮಕ್ಕೆ ಸಂಬಂಧಿಸಿದ 1.16 ಕೋಟಿ ಹಣ ಮನೆಯಲ್ಲಿಟ್ಟಿದ್ದರು.

ಕಳ್ಳರು ಅಪಾರ್ಟ್‌ಮೆಂಟ್‌ಗೆ ನುಗ್ಗಿ 1.16 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದರು. ಘಟನೆಯ ನಂತರ ಉದ್ಯಮಿ ಸುನೀಲ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪೊಲೀಸರು ಕಳ್ಳರಿಬ್ಬರನ್ನು ಬಂಧಿಸಿ, 1.16 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ : ನಾಟಿಕೋಳಿಗಿಂತಲೂ ನುಗ್ಗೆಕಾಯಿ ದುಬಾರಿ – ಒಂದು ಕೆಜಿ ನುಗ್ಗೆ ಬೆಲೆ 700 ರೂಪಾಯಿ!







