ಬಾಗಲಕೋಟೆ : ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ಗೆ ಕಾರ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಸಿದ್ದಾಪುರ ಬಳಿ ನಡೆದಿದೆ. 17 ವರ್ಷದ ವಿಶ್ವನಾಥ್, 22 ವರ್ಷದ ಪ್ರವೀಣ್, 20 ವರ್ಷದ ಗಣೇಶ್, 17 ವರ್ಷದ ಪ್ರಜ್ವಲ್ ಮೃತದುರ್ದೈವಿಗಳು.

ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಮೃತಪಟ್ಟವರು ಸಿದ್ದಾಪುರ ಗ್ರಾಮದ ನಿವಾಸಿಗಳು. ಕಾರಿನಲ್ಲಿದ್ದ ಮೃತದೇಹವನ್ನು ಪೊಲೀಸರು ಜೆಸಿಬಿಯಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಹೆಸ್ಕಾಂನಲ್ಲಿ 90 ಕೋಟಿ ಟ್ರಾನ್ಸ್‌ಫಾರ್ಮರ್ ಹಗರಣ ಬಯಲು – ಇಂಧನ ಇಲಾಖೆಯಿಂದಲೇ ಭ್ರಷ್ಟ ಅಧಿಕಾರಿಗಳ ಬೇಟೆ.. ಸಿಐಡಿ ತನಿಖೆಗೆ ಆದೇಶ!
Author: Btv Kannada
Post Views: 435







