ಹೊಸ ಯುವನಟನ ಹುಡುಕಾಟದಲ್ಲಿ ನಿರ್ದೇಶಕ ಸುಧೀರ್ ಅತ್ತಾವರ್!

“ಕೊರಗಜ್ಜ” ಚಿತ್ರದ ಕೆಲಸ ಕಾರ್ಯಗಳು ಮುಗಿದು, ಇನ್ನೇನು ಬಿಡುಗಡೆಯ ಹಂತದಲ್ಲಿರಬೇಕಾದರೆ ಇದರ ನಿರ್ದೇಶಕ ಸುಧೀರ್ ಅತ್ತಾವರ್ ಹೊಸ ಸಿನಿಮಾದ ತಯಾರಿ ಶುರು ಮಾಡುವುದರಲ್ಲಿದ್ದಾರೆ. ಅದು ಕೂಡಾ ಸ್ಟಾರ್ ನಟಿಯೊಬ್ಬರ ಸುರಸಂದರಾಂಗಿ ಪುತ್ರಿಯನ್ನು ಲಾಂಚ್ ಮಾಡೋ ಹಂತದಲ್ಲಿದ್ದಾರೆ. ಆ ಸ್ಟಾರ್ ನಟಿ ಕೂಡಾ ಸುಧೀರ್ ಅತ್ತಾವರ್ ಕೈಯಿಂದಲೇ ತನ್ನ ಮಗಳನ್ನು ಲಾಂಚ್ ಮಾಡಿಸಬೇಕು ಎಂಬ ಉತ್ಸುಕತೆಯಲ್ಲಿದ್ದಾರೆ.

ಅಲ್ಲದೆ ಈ ಸುರ ಸುಂದರಾಂಗಿ ಚೆಲುವೆಯನ್ನು ನಾಯಕಿಯಾಗಿ ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ನೀಡಿದ್ದ ನಿರ್ದೇಶಕ-ನಿರ್ಮಾಪಕರಿಗೆಲ್ಲ ನೋ ಎಂದಿದ್ದ ಮೇಡಂ ಅವರು ಸುಧೀರ್ ಅತ್ತಾವರ್ ರವರ ಕೈ ಯಿಂದಲೇ ಪರಿಚಯಿಸಬೇಕೆಂದು ಹರಸಿಕೊಂಡಿದ್ದಾರೆ. ಆ ಸ್ಟಾರ್ ನಟಿಯ ಪುತ್ರಿಯ ಎದುರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಲು ಮುಗ್ಧ ಮುಖದ, ಸುಮಾರು 19ರಿಂದ 23 ವರ್ಷಗಳ‌ ಒಳಗಿನ ಸ್ಫುರಧ್ರೂಪಿ‌ ಕಟ್ಟುಮಸ್ತಾದ ರಾಜಕುಮಾರನ ಮುಖ್ಯಪಾತ್ರಕ್ಕಾಗಿ ಯುವನಟನ ಹುಡುಕಾಟದಲ್ಲಿದ್ದಾರೆ.

ಆಸಕ್ತರು ನಿರ್ದೇಶಕರ ಇಮೇಲ್ ವಿಳಾಸಕ್ಕೆ ತಮ್ಮ ವಿವರ ಸಮೇತ ಫೋಟೋಗಳನ್ನು ಕಳುಹಿಸಬಹುದು. ಅಂದಹಾಗೆ ಇದೊಂದು ಅಂತರ್ರಾಷ್ಟ್ರೀಯ ಪ್ರಾಜೆಕ್ಟ್ ಎಂಬ ಕ್ಲೂ ನಿರ್ದೇಶಕರು ನೀಡಿದ್ದಾರೆ.

ಇದನ್ನೂ ಓದಿ : ಡಿಸಿಎಂ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ – ಇಡ್ಲಿ, ನಾಟಿಕೋಳಿ ಸಾಂಬಾರ್ ಸವಿದ ಸಿದ್ದು!

Btv Kannada
Author: Btv Kannada

Read More