ದೇವಸ್ಥಾನದ ಮುಂದೆ ಮಂಗಳಮುಖಿಯರ ಫೈಟ್ – ವಿಡಿಯೋ ವೈರಲ್!

ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಐತಿಹಾಸಿಕ ಆರತಿ ಉಕ್ಕಡದ ದೇವಾಲಯದ ಮುಂದೆ ಸೆಪ್ಟೆಂಬರ್ 29 ರಂದು ಹಣದ ವಿಚಾರಕ್ಕೆ ಸಂಬಂಧಿಸಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಯಲ್ಲಿ ಗಾಯಗೊಂಡ ಮಂಗಳಮುಖಿಯರ ತಂಡವು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮೇಲೆ ನಡೆದ ಹಲ್ಲೆ ಮತ್ತು ನ್ಯಾಯ ಸಿಗದಿರುವ ಬಗ್ಗೆ ಕಣ್ಣೀರು ಹಾಕಿದೆ.

ಹಣಕಾಸಿನ ವಿವಾದಕ್ಕೆ ಕಿತ್ತಾಟ ಪ್ರಾರಂಭವಾಗಿ, ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ದೊಣ್ಣೆ ಮತ್ತು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದೆ. ಹಲ್ಲೆ ವೇಳೆ ಬಟ್ಟೆ ಹರಿಯುವ ಘಟನೆಯೂ ನಡೆದಿದೆ. ಗಲಾಟೆಯಲ್ಲಿ ಮೂವರು ಮಂಗಳಮುಖಿಯರಿಗೆ ಗಾಯಗಳಾಗಿವೆ. ಹಲ್ಲೆಗೊಳಗಾದ ಮಂಗಳಮುಖಿಯರ ತಂಡವೊಂದು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿದೆ.

ಘಟನೆ ನಡೆದು ಇಷ್ಟು ದಿನವಾದರೂ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರು ಹಾಕುತ್ತಾ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಿರಿಯ ಪತ್ರಕರ್ತ ಆ.ಚ ಶಿವಣ್ಣ ವಿಧಿವಶ!

Btv Kannada
Author: Btv Kannada

Read More