ಹಿರಿಯ ಪತ್ರಕರ್ತ ಆ.ಚ ಶಿವಣ್ಣ ವಿಧಿವಶ!

ಹಿರಿಯ ಪತ್ರಕರ್ತ ಆ.ಚ ಶಿವಣ್ಣ (87) ಅವರು ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಶಿವಣ್ಣ ಅವರು ತಮ್ಮ ಬಿಟಿಎಂ ಲೇಔಟ್ ನಿವಾಸದಲ್ಲಿ ಅಲ್ಪಕಾಲದ ಅಸ್ವಸ್ಥತೆಯಿಂದ ಕೊನೆಯುಸಿರೆಳೆದಿದ್ದಾರೆ.

ಸುಮಾರು 45 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಹಿರಿಯ ವರದಿಗಾರರಾಗಿ ಪ್ರಖ್ಯಾತಿ ಪಡೆದಿರುವ ಶಿವಣ್ಣ ಅವರು ಕರುನಾಡ ಸಂಜೆ ಸೇರಿದಂತೆ ಸಂಜೆವಾಣಿ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಶಿವಣ್ಣ ಅವರ ಪುತ್ರ ಡಾಕ್ಟರ್ ದೀಪಕ್ ಶಿವಣ್ಣ ಹಾಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ಡಿ.8ರಿಂದ ಚಳಿಗಾಲದ ಅಧಿವೇಶನ – 6 ಸಾವಿರ ಪೊಲೀಸರು ಭದ್ರತೆಗೆ ನಿಯೋಜನೆ!

Btv Kannada
Author: Btv Kannada

Read More