ʻದಿ ಡೆವಿಲ್‌ʼ ಸಿನಿಮಾ ರಿಲೀಸ್​ಗೆ ರೆಡಿ – ಡಿ.11ಕ್ಕೆ ಬಿಗ್‌ ಸ್ಕ್ರೀನ್‌ನಲ್ಲಿ ದರ್ಶನ್‌ ಅಬ್ಬರ!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ʻದಿ ಡೆವಿಲ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಡಿಸೆಂಬರ್‌ 11ರಂದು ಚಿತ್ರ ರಾಜ್ಯಾದ್ಯಂತ ರಿಲೀಸ್‌ ಆಗಲಿದೆ. ದರ್ಶನ್ ಅನುಪಸ್ಥಿತಿಯ ನಡುವೆಯೂ ಚಿತ್ರತಂಡವು ಪ್ರಚಾರ ಕಾರ್ಯಗಳನ್ನು ಕೈಗೊಂಡಿದ್ದು, ಪ್ರಚಾರಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಾಥ್ ನೀಡುತ್ತಿದ್ದಾರೆ.

ಈಗಾಗಲೇ ಸಿನಿಮಾ ಎರಡು ಹಾಡುಗಳನ್ನೂ ರಿಲೀಸ್ ಮಾಡಿದ್ದು, ಡಿಸೆಂಬರ್‌ 11 ರಂದು ಗ್ರ್ಯಾಂಡ್‌ ರಿಲೀಸ್‌ ಆಗಲಿರುವ ʻದಿ ಡೆವಿಲ್‌ʼ ಚಿತ್ರಕ್ಕೆ ಅಭಿಮಾನಿಗಳಿಂದಲೇ ಬಂಪರ್‌ ಓಪನಿಂಗ್‌ ಸಿಗುವ ನಿರೀಕ್ಷೆಯಿದೆ.

ಡಿ.11ರಂದು ದರ್ಶನ್ ಬಿಗ್​ಸ್ಕ್ರೀನ್ ಮೇಲೆ ಅಬ್ಬರಿಸೋಕೆ ರೆಡಿಯಾಗಿದೆ. ಸಿನಿಮಾ ರಿಲೀಸ್​ಗೆ ಜಸ್ಟ್ 14 ದಿನಗಳು ಬಾಕಿ ಇದ್ದು, ಫ್ಯಾನ್ಸ್​ ಡೆವಿಲ್​ನ ಬಿಗ್ ಸ್ಕ್ರೀನ್​ ಮೇಲೆ ನೋಡೋದಕ್ಕೆ ಕಾತುರದಿಂದ ಕಾಯ್ತಾ ಇದ್ದಾರೆ.

‘ಡೆವಿಲ್’ ಚಿತ್ರವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದರ್ಶನ್​ಗೆ ರಚನಾ ರೈ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಮರಾಠಿ ನಟ ಮಹೇಶ್ ಮಂಜ್ರೇಕರ್, ನಟಿ ಶರ್ಮಿಳಾ ಮಾಂಡ್ರೆ, ವಿನಯ್ ಗೌಡ ಇನ್ನೂ ಹಲವು ನಟ-ನಟಿಯರು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸಿನಿಮಾಕ್ಕೆ ಪ್ರಕಾಶ್ ಅವರೇ ಬಂಡವಾಳ ಹಾಕಿದ್ದಾರೆ.

ಇದನ್ನೂ ಓದಿ : ಈ ವಾರದ ನ್ಯೂಸ್ ಚಾನೆಲ್ TRP ಬಿಡುಗಡೆ – NEWS-18 ಕನ್ನಡ ನಂ.1, TV9 ಕನ್ನಡ ನಂ.2 ಸ್ಥಾನದಲ್ಲಿ! 

Btv Kannada
Author: Btv Kannada

Read More