ಬೆಂಗಳೂರು : ಈ ವಾರದ ನ್ಯೂಸ್ ಚಾನೆಲ್ TRP ಬಿಡುಗಡೆ ಆಗಿದೆ. 46ನೇ ವಾರದ TRPಯಲ್ಲಿ News 18 ಕನ್ನಡ ನಂಬರ್- 1 ಸ್ಥಾನದಲ್ಲಿದ್ದು 68.09 ರೇಟಿಂಗ್ ಪಾಯಿಂಟ್ ಪಡೆದುಕೊಂಡು ಅಗ್ರಸ್ಥಾನದಲ್ಲಿದೆ. ದೇಶ-ವಿದೇಶ ಹಾಗೂ ರಾಜ್ಯದ ಮೂಲೆ ಮೂಲೆಯಲ್ಲಿನ ಸುದ್ದಿಗಳನ್ನು ಶೀಘ್ರವಾಗಿ ಹಾಗೂ ಕರಾರುವಕ್ಕಾಗಿ ನೀಡುವುದರ ಮೂಲಕ News 18 ಕನ್ನಡ ವಾಹಿನಿ ಕನ್ನಡಿಗರ ಮನ ಗೆದ್ದಿದೆ. ರಾಜಕೀಯ ಸುದ್ದಿಗಳನ್ನು, ಅಪರಾಧ ಜಗತ್ತಿನ ವಿಚಾರಗಳನ್ನು ರಣ ರೋಚಕವಾಗಿ ಬಿತ್ತರಿಸೋದು News 18 ಕನ್ನಡ ಚಾನೆಲ್ ಹಿರಿಮೆಯಾಗಿದೆ. ಸುದ್ದಿಗೆ ಹೊಸತನದ & ಬಗೆ ಬಗೆಯ ಆ್ಯಂಗಲ್, ಆ್ಯಂಕರ್ಸ್ಗಳ ಒಳನೋಟವೂ ನಂಬರ್-1 ಸ್ಥಾನಕ್ಕೇರಲು ಸಾಧ್ಯವಾಗಿದೆ.

ಕರ್ನಾಟಕ ರಾಜ್ಯದ ಟಾಪ್ 5 ಚಾನಲ್ಗಳ TRP ರಿಲೀಸ್ ಆಗಿದೆ. ಈ ವಾರದ TRPಯಲ್ಲಿ News 18 ಕನ್ನಡ ಮೊದಲ ಸ್ಥಾನದಲ್ಲಿದ್ರೆ, TV-9 ಕನ್ನಡ ಸುದ್ದಿ ವಾಹಿನಿ 66.03 ರೇಟಿಂಗ್ ಪಾಯಿಂಟ್ ಪಡೆದು 2ನೇ ಸ್ಥಾನದಲ್ಲಿದೆ. ಪಬ್ಲಿಕ್ ಟಿವಿ ಚಾನೆಲ್ 52. 96 ರೇಟಿಂಗ್ನೊಂದಿಗೆ 3ನೇ ಸ್ಥಾನ ಪಡೆದಿದ್ದು, ಸುವರ್ಣ ನ್ಯೂಸ್ 28.27 ರೇಟಿಂಗ್ನೊಂದಿಗೆ 4ನೇ ಸ್ಥಾನ ಪಡೆದಿದೆ. ಇನ್ನು NEWS-1ST ಚಾನೆಲ್ 18.11 ರೇಟಿಂಗ್ ಪಾಯಿಂಟ್ ಪಡೆದು 5ನೇ ಸ್ಥಾನದಲ್ಲಿದೆ.

ಸುದ್ದಿ ವಾಹಿನಿಗಳು ಜನರಿಗೆ ಅಗತ್ಯವಾದ ಸುದ್ದಿ, ಮಾಹಿತಿ, ಘಟನೆಗಳನ್ನು ತಿಳಿಸುವುದರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಸುದ್ದಿಯನ್ನು ಆದಷ್ಟು ಬೇಗನೇ ಕೊಡುವುದರ ಮೂಲಕ ಉಳಿದ ನ್ಯೂಸ್ ಚಾನೆಲ್ಗಳಿಗಿಂತ ನಮ್ಮ ಚಾನೆಲ್ ನಂಬರ್-1 ಎನ್ನುವ ಹಪಾಹಪಿಗೆ ಬಿದ್ದು ಸುದ್ದಿಯನ್ನು ಬಿತ್ತರಿಸುತ್ತವೆ.

ನಮ್ಮಲ್ಲೇ ಮೊದಲು.. ಬಿಗ್ ಎಕ್ಸ್ಕ್ಲೂಸಿವ್.. ಬೆಚ್ಚಿ ಬೀಳುವ ಬ್ಲಾಸ್ಟ್ ಸ್ಟೋರಿ.. ಒಂದು ಪಕ್ಷದ ಪರ ಸುದ್ದಿ ಪ್ರಸಾರ, ನಿರ್ದಿಷ್ಟ ಸಮುದಾಯದ ವಿರುದ್ಧ ಎಂತೆಲ್ಲಾ ಸುದ್ದಿ ಪ್ರಸಾರ ಮಾಡ್ತಾರೆ ಆದ್ರೆ ಜನರು ಮಾತ್ರ ನಾವು ಯಾವ ನ್ಯೂಸ್ ಚಾನೆಲ್ ನೋಡಬೇಕು ಅಥವಾ ಬೇಡ ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿ ಈ ವಾರದ ನ್ಯೂಸ್ ಚಾನೆಲ್ TRPಯಲ್ಲಿ NEWS-18 ಕನ್ನಡ ಸುದ್ದಿ ವಾಹಿನಿ ನಂಬರ್-1 ಆಗಿದ್ದು ಉಳಿದ ಚಾನೆಲ್ಗಳು ಜನರ ಮನಸ್ಸು ಗೆಲ್ಲಲು ಪೈಪೋಟಿಗೆ ಬಿದ್ದಿರೋದಂತು ಸತ್ಯ.



ಇದನ್ನೂ ಓದಿ : Zee5ನಲ್ಲಿ ನ. 28ಕ್ಕೆ ಮಲಯಾಳಂ ದಿ ಪೆಟ್ ಡಿಟೆಕ್ಟಿವ್ ಸ್ಟ್ರೀಮಿಂಗ್!







