ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​​ ಹಸೀನಾಗೆ ಗಲ್ಲು ಶಿಕ್ಷೆ!

ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT-BD) ಗಲ್ಲು ಶಿಕ್ಷಿ ವಿಧಿಸಿದೆ. ತ್ರಿಸದಸ್ಯ ನ್ಯಾಯಪೀಠವು ಶೇಖ್‌ ಹಸೀನಾ ಅವರ ಮೇಲಿರುವ ಆರೋಪ ಸಾಬೀತಾಗಿದೆ ಎಂದು ಹೇಳಿ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್​ ಹಸೀನಾ ಅವರನ್ನು 2024ರ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಘೋಷಿಸಿರುವ ಅಂತಾರಾಷ್ಟ್ರೀಯ ಅಪರಾಧಿಕ ನ್ಯಾಯ ಮಂಡಳಿ (ICT) ಕೋರ್ಟ್, ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ನ್ಯಾಯ ಮಂಡಳಿಯು, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇಖ್​ ಹಸೀನಾ ಅಪರಾಧಿ ಎಂದು ತೀರ್ಪು ನೀಡಿದೆ.

2024ರಲ್ಲಿ 56% ಮೀಸಲಾತಿಗಾಗಿ ವಿದ್ಯಾರ್ಥಿಗಳು ಚಳವಳಿ ನಡೆಸಿದ್ದರು. ವಿದ್ಯಾರ್ಥಿ ಚಳವಳಿಯಲ್ಲಿ ಬಾಂಗ್ಲಾದಲ್ಲಿ 1,400 ಜನ ಸಾವನ್ನಪ್ಪಿದ್ದರು. ನಂತರ 2024 ಆಗಸ್ಟ್​​ 5ರಂದು ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು.

ಇದನ್ನೂ ಓದಿ : “ಚಿತ್ರಲಹರಿ” ಸಿನಿಮಾದ ಟೀಸರ್ & ಸಾಂಗ್ಸ್ ರಿಲೀಸ್ – ಸಾಥ್ ಕೊಟ್ಟ ಚಿತ್ರರಂಗದ ಗಣ್ಯರು!

Btv Kannada
Author: Btv Kannada

Read More