ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಕಾರ್ ಸ್ಪೋಟಕಕ್ಕೆ 11 ಜನ ಬಲಿಯಾಗಿದ್ದು, 30ಕ್ಕೂ ಹೆಚ್ಚು ಜನಕ್ಕೆ ಗಂಭೀರ ಗಾಯಗಳಾಗಿವೆ. ನಿನ್ನೆ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಈ ಭೀಕರ ಕಾರು ಸ್ಫೋಟವು ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದೆ.

ಮೃತದೇಹಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಗಾಯಾಳುಗಳಿಗೆ LNJP ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ ಸ್ಫೋಟದ ತೀವ್ರತೆಗೆ ಮೆಟ್ರೋ ಸ್ಟೇಷನ್ಗೂ ಹಾನಿಯಾಗಿದ್ದು, ಸ್ಫೋಟದ ಬೆನ್ನೆಲ್ಲೇ ಕೆಂಪುಕೋಟೆಯ ಪಾರ್ಕಿಂಗ್ ಕ್ಲೋಸ್ ಮಾಡಲಾಗಿದೆ.

ಕೆಂಪುಕೋಟೆ ಬಳಿ ನಡೆದಿದ್ದು ಭಯೋತ್ಪಾದಕ ಕೃತ್ಯನಾ? ದೆಹಲಿಯ ಕೆಂಪುಕೋಟೆ ಬಳಿ ಬ್ಲಾಸ್ಟ್ ಆಗಿದ್ದು ಐ-20 ಕಾರು. ಇದು ಫರೀದಾಬಾದ್ನ ಬದರ್ಪುರ್ ಗಡಿಯಿಂದ ಬಂದಿತ್ತು. ದೆಹಲಿ ಬ್ಲಾಸ್ಟ್ಗೂ ಫರೀದಾಬಾದ್ಗೂ ಲಿಂಕ್ ಇರೋದು ಬಹುತೇಕ ಖಚಿತವಾಗಿದೆ. ಹಾಗಾಗಿ ಇದೀಗ ಸ್ಫೋಟಕವಿಟ್ಟು ಬ್ಲಾಸ್ಟ್ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಗ್ಗೆ ಫರೀದಾಬಾದ್ನಲ್ಲಿ 2,900 ಕೆಜಿ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿತ್ತು. ಕಾಶ್ಮೀರ ಮೂಲದ ವೈದ್ಯರು ಫರೀದಾಬಾದ್ನಲ್ಲಿ ಅರೆಸ್ಟ್ ಆಗಿದ್ದರು. ಬಂಧಿತ ಇಬ್ಬರ ಜೊತೆ ನಂಟಿದ್ದ ವ್ಯಕ್ತಿ ಉಮರ್ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಫೋಟಗೊಂಡ ಕಾರು ಕಾಶ್ಮೀರದಿಂದ ದೆಹಲಿಗೆ ಬಂದಿದ್ದೇಗೆ? ಐ-20 ಖಾಸಗಿ ಕಾರು ದೆಹಲಿ ಪ್ರವೇಶಿಸಿದ್ದೇಗೆ? ಸರಿಯಾಗಿ ಸಿಗ್ನಲ್ ಸ್ಟಾಪ್ ಸಮಯಕ್ಕೆ ಕಾರು ಬಂದಿದ್ದೇಗೆ? ಎಂಬ ಪ್ರಶ್ನೆ ಹುಟ್ಟಕೊಂಡಿದೆ. ಕೆಂಪುಕೋಟೆ ಬಳಿ ನಿಲ್ಲುತ್ತಿದ್ದಂತೆ ಕಾರು ಸ್ಪೋಟಗೊಂಡಿದೆ. ಇದು ಭಯೋತ್ಪಾದಕ ಕೃತ್ಯ ಎಂದು ದೆಹಲಿ ಪೊಲೀಸರು ಪರಿಗಣನೆ ಮಾಡಿದ್ದಾರೆ. ದೆಹಲಿ ಸ್ಪೋಟ ಉಗ್ರರ ದುಷ್ಕೃತ್ಯ ಎಂದು ಪರಿಗಣಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ FIR ದಾಖಳಾಗಿದ್ದು, ಉಗ್ರರ ದುಷ್ಕೃತ್ಯ ಎಂದು ಪರಿಗಣಿಸಿ NIA ತನಿಖೆಗಿಳಿದಿದೆ. ಸ್ಪೋಟಕ ಕಾಯ್ದೆ ಸೆಕ್ಷನ್ 3, 4ರ ಅಡಿಯಲ್ಲೂ ತನಿಖೆ ನಡೆಸಲಾಗುತ್ತದೆ. ಕೃತ್ಯದ ಹಿಂದೆ ಜೈಷ್-ಎ-ಮಹಮ್ಮದ್ ಸಂಘಟನೆ ಕೈವಾಡ ಇರುವ ಶಂಕೆ ಇದೆ.
ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನ ಬಗ್ಗೆ ಪೊಲೀಸರ ತನಿಖೆ : ನಿನ್ನೆ ಮಧ್ಯಾಹ್ನ 3.19ಕ್ಕೆ ಕಾರು ಸುನೇಹ್ರಿ ಮಸೀದಿ ಬಳಿ ಬಂದಿತ್ತು. ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ I-20 ಕಾರು ಎಂಟ್ರಿಯಾಗಿತ್ತು. ಸಂಜೆ 6.23ಕ್ಕೆ ಕಾರು ಪಾರ್ಕಿಂಗ್ ಲಾಟ್ನಿಂದ ನಿರ್ಗಮಿಸಿತ್ತು, ನಂತರ ಸುಮಾರು 3 ಗಂಟೆಗಳ ಕಾಲ ಪಾರ್ಕಿಂಗ್ ಲಾಟ್ನಲ್ಲಿತ್ತು. ಡಾ.ಉಮರ್ ಮೃತಪಟ್ಟ ಬಗ್ಗೆ ಭದ್ರತಾ ಪಡೆಗಳಿಗೆ ಅನುಮಾನ ಮೂಡಿಸಿದೆ, ಉಮರ್ ಫರೀದಾಬಾದ್ ವೈದ್ಯರ ಸಂಪರ್ಕದಲ್ಲಿದ್ದ.
ಫರಿದಾಬಾದ್ ಸ್ಫೋಟಕಕ್ಕೂ ದೆಹಲಿ ಸ್ಪೋಟಕಕ್ಕೂ ಲಿಂಕ್? ಪೊಲೀಸರು ಸ್ಫೋಟಕಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದು, ಫರಿದಾಬಾದ್ ಅಪರಾಧ ವಿಭಾಗದ ಪೊಲೀಸರಿಂದ ತನಿಖೆ ನಡೆಯುತ್ತಿದೆ. ದೆಹಲಿ ಪೊಲೀಸರು ಕಾಶ್ಮೀರ ಪೊಲೀಸರಿಂದ ಮಾಹಿತಿ ಕೇಳಿದ್ದು, ಅಮೋನಿಯಂ ನೈಟ್ರೇಟ್ ಬಳಕೆ ಸಾಧ್ಯತೆ ಬಗ್ಗೆ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದೆ. ದೆಹಲಿ ಪೊಲೀಸರು ಕಾರಿನ ಮೂಲ ಕೆದಕುತ್ತಿದ್ದಾರೆ. ಪುಲ್ವಾಮಾ ಮೂಲದ ತಾರಿಕ್ಗೆ ಸೇರಿದ HR 26 CE 7674 ನಂಬರ್ನ ಕಾರು. ಕಾರ್ ಡೀಲರ್ನಿಂದ ತಾರಿಕ್ I-20 ಖರೀದಿಸಿದ್ದ. ನಕಲಿ ದಾಖಲೆಗಳನ್ನು ನೀಡಿ ತಾರಿಕ್ ಕಾರು ಖರೀದಿಸಿದ್ದ. ಸದ್ಯ ತಾರಿಕ್ ಅನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಾರಿಕ್ ಜಮ್ಮು-ಕಾಶ್ಮೀರದ ಫರಿದಾಬಾದ್ ನಿವಾಸಿ.
ಸ್ಫೋಟದ ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲಾಗಿದ್ದು, ಇಬ್ಬರು ಬಂಧನವಾಗ್ತಿದ್ದಂತೆ ದೆಹಲಿಯಲ್ಲಿ ಸ್ಫೋಟಗೊಂಡಿದೆ. ಡಾ.ಉಮರ್ ನಬಿ ಭಯಗೊಂಡು ಬ್ಲಾಸ್ಟ್ ಮಾಡಿರೋ ಅನುಮಾನವಿದೆ. ಪೊಲೀಸರು ಉಗ್ರರ ನಂಟಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು ದೆಹಲಿ ಕಾರ್ ಬ್ಲಾಸ್ಟ್ ನಿಂದಾಗಿ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಮಜೆಸ್ಟಿಕ್ ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ!







