ಐತಿಹಾಸಿಕ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ – 26 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ!

ಉತ್ತರ ಪ್ರದೇಶ : ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದ್ದು, 26 ಲಕ್ಷಕ್ಕೂ ಹೆಚ್ಚು ದೀಪಗಳಿಂದ ಅಯೋಧ್ಯೆ ಕಂಗೊಳಿಸಿದೆ. ಸರಯೂ ನದಿಯ ದಡದಲ್ಲಿ ಬರೋಬ್ಬರಿ 26,17,215 ಮಣ್ಣಿನ ದೀಪಗಳನ್ನು ಬೆಳಗಿಸಲಾಯಿತು. ಉತ್ತರ ಪ್ರದೇಶ ಸರ್ಕಾರವು ಈ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸುವ ಮೂಲಕ ಅತಿದೊಡ್ಡ ದೀಪ ಪ್ರದರ್ಶನದ ಹೊಸ ದಾಖಲೆಯನ್ನು ನಿರ್ಮಿಸಿತು. ಇದರ ಜೊತೆಗೆ, ಏಕಕಾಲದಲ್ಲಿ ಅತಿ ಹೆಚ್ಚು ಜನರು ಆರತಿ ಮಾಡುವ ಮೂಲಕ ಮತ್ತೊಂದು ಹೊಸ ವಿಶ್ವ ದಾಖಲೆಯನ್ನು ಸಹ ಸೃಷ್ಟಿಸಲಾಯಿತು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸ್ವೀಕರಿಸಿದರು. ದೀಪಾವಳಿ ಹಬ್ಬದ ವಾತಾವರಣಕ್ಕೆ ಮೆರುಗು ನೀಡಲು ರಾಮಲೀಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲದೆ, ರಾಮ್ ಕಿ ಪೈಡಿಯಲ್ಲಿ ಅದ್ಭುತವಾದ ಲೇಸರ್ ಮತ್ತು ಬೆಳಕಿನ ಪ್ರದರ್ಶನವನ್ನು ಆಯೋಜಿಸಲಾಗಿತ್ತು, ಇದು ಭಕ್ತರ ಕಣ್ಮನ ಸೆಳೆಯಿತು.

ಶ್ರೀರಾಮನ ಜನ್ಮಭೂಮಿ ಐತಿಹಾಸಿಕ ಅಯೋಧ್ಯೆ ನಗರದಲ್ಲಿ ದೀಪಾವಳಿ ಹಬ್ಬದ ಸಂಭ್ರಮವು ಈ ಬಾರಿ ವಿಶ್ವದ ಗಮನ ಸೆಳೆಯಿತು. ಸರಯೂ ನದಿಯ ಪವಿತ್ರ ದಡವು ಕೋಟ್ಯಂತರ ಹಣತೆಗಳ ಪ್ರಕಾಶದಲ್ಲಿ ಬೆಳಗಿತು, ಇದು ಸ್ವರ್ಗೀಯ ದೃಶ್ಯವನ್ನು ಸೃಷ್ಟಿಸಿತ್ತು.

ಇದನ್ನು ಓದಿ : ಮಂಡ್ಯದಲ್ಲಿ 3 KSRTC ಬಸ್​ಗಳ ನಡುವೆ ಭೀಕರ ಅಪಘಾತ – ಮೂವರು ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ!

 

Btv Kannada
Author: Btv Kannada

Read More