ನಿತಾ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ. ಉದ್ಯಮಿ ಕೂಡ ಆಗಿರುವ ನಿತಾ ಅಂಬಾನಿ ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿಯ ದುಬಾರಿ ಸೀರೆ, ಬ್ಯಾಗ್ಗಳ ಮೇಲೆಯೇ ಎಲ್ಲರು ಕಣ್ಣಿಟ್ಟಿದ್ದಾರೆ. ಇದೀಗ ನೀತಾ ಅಂಬಾನಿ 15 ಕೋಟಿ ರೂಪಾಯಿ ಮೌಲ್ಯದ ಹರ್ಮಿಸ್ ಬಿರ್ಕಿನ್ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು.. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿವೆ. ಹೀಗಿರುವಾಗ ಪ್ರತಿವರ್ಷದಂತೆ ಈ ವರ್ಷವೂ ಬಾಲಿವುಡ್‌ನ ಡಿಸೈನರ್ ಮನಿಷ್ ಮಲ್ಹೋತ್ರಾ ಅವರು ಸಿನಿಮಾ ತಾರೆಯರು ಉದ್ಯಮಿಗಳು ಸ್ನೇಹಿತರಿಗಾಗಿ ದೀಪಾವಳಿ ಹಬ್ಬದ ಆಚರಣೆಯನ್ನು ಮನೆಯಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಮಹಿಳಾ ಉದ್ಯಮಿ ನೀತಾ ಅಂಬಾನಿ ಕೂಡ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಅಲ್ಲಿ ಎಲ್ಲರ ಗಮನ ಸೆಳೆದಿದ್ದು, ನೀತಾ ಅಂಬಾನಿ ಅವರ ಬಿರ್ಕಿನ್ ಬ್ಯಾಗ್. ನೀತಾ ತೋಳಲ್ಲಿ ತೂಗಾಡುತ್ತಿದ್ದ ಆ ಬ್ಯಾಗ್ ಜಗತ್ತಿನ ಅತೀ ದುಬಾರಿ ಬ್ಯಾಗ್ ಎನಿಸಿದೆ.
ಈ ಕಾರ್ಯಕ್ರಮಕ್ಕೆ ನೀತಾ ಹರ್ಮಿಸ್ ಬಿರ್ಕಿನ್ ಸ್ಪೆಷಲ್ ಎಡಿಷನ್ ಮಿನಿಯೇಚರ್ ಬ್ಯಾಗ್ ಹಿಡಿದು ಬಂದಿದ್ದರು. ನೀತಾ ಅಂಬಾನಿಯ ಈ ಬ್ಯಾಗ್ ಹರ್ಮಿಸ್ ಕೆಲ್ಲಮೊರ್ಫೋಸ್ ಬ್ಯಾಗ್ ಹಲವು ಆಭರಣಗಳಿಂದ ನಿರ್ಮಿತವಾಗಿರುವ ಬ್ಯಾಗ್ ಆಗಿದ್ದು, ಈ ಬ್ಯಾಗ್ ಐತಿಹಾಸಿಕ ಕೆಲ್ಲಿ ಬ್ಯಾಗ್‌ನಿಂದ ಪ್ರೇರಣೆ ಪಡೆದು ನಿರ್ಮಿತವಾಗಿದೆ. ಪ್ರಪಂಚದ ಅತೀ ದುಬಾರಿ ಬ್ಯಾಗ್ ಎನಿಸಿದೆ. ಹಾಗೆಯೇ ಐತಿಹಾಸಿಕ ಹೆರ್ಮಿಸ್ ಸಾಕ್ ಬಿಜೋಸ್ ಬಿರ್ಕಿನ್ ಬ್ಯಾಗ್ನ್ನು 18 ಕ್ಯಾರೇಟ್ ಚಿನ್ನದಿಂದ ನಿರ್ಮಿಸಲಾಗಿದ್ದು, ಇದರಲ್ಲಿ 3,035 ವಜ್ರಗಳಿವೆ.
ಈ ಬ್ಯಾಗ್‌ನ ಮೇಲ್ಭಾಗದ ಫ್ಲಾಪ್ ಮೊಸಳೆಯ ಚರ್ಮದಂತೆ ವಿನ್ಯಾಸಗೊಂಡಿದೆ. ಆದರೆ ವಜ್ರಗಳು ಚೀಲದ ಇಡೀ ಬ್ಯಾಗನ್ನು ಅಲಂಕರಿಸಿದ್ದು ಈ ಬ್ಯಾಗ್‌ನ ಮೇಲಿನ ಹಿಡಿಕೆಗಳು, ಟೂರೆಟ್, ಕ್ಯಾಡೆನಾ ಲಾಕ್ ಮತ್ತು ಕ್ಲೋಚೆಟ್ ಅನ್ನು ಹೊಂದಿವೆ. ಈ ಚೀಲವನ್ನು ವಿಶ್ವದ ಅತ್ಯಂತ ದುಬಾರಿ ಆರ್ಮ್ ಕ್ಯಾಂಡಿ ಎಂದು ಹೇಳಲಾಗುತ್ತದೆ. ನೀತಾ ಅಂಬಾನಿಯವರ ಬಿರ್ಕಿನ್ ಚೀಲದ ಬೆಲೆ 1,770,300 ಯುಎಸ್ ಡಾಲರ್ ಆಗಿದ್ದು, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 15 ಕೋಟಿ ರೂ. ಆಗಿದೆ.
ಇದನ್ನೂ ಓದಿ : ಗ್ಯಾರಂಟಿ ಬಗ್ಗೆ ಲೇವಡಿ – ವಿರೋಧ ಹೆಚ್ಚಾಗ್ತಿದ್ದಂತೆ ಉಲ್ಟಾ ಹೊಡೆದ ಆರ್‌ವಿ ದೇಶಪಾಂಡೆ!







