ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ – ಎಲ್ಲೆಲ್ಲಿ ಎಷ್ಟು ಬೆಲೆ?

ನವದೆಹಲಿ : ಆಯುಧ ಪೂಜೆಯಂದೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ ಏರಿಕೆಯ ಶಾಕ್ ಕೊಟ್ಟಿದೆ. 19 ಕೆಜಿ ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 15.50 ರೂ. ಏರಿಕೆ ಮಾಡಿದೆ.

ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಮಾರುಕಟ್ಟೆ ಕಂಪನಿಗಳು ಹೊಸ ಪರಿಷ್ಕರಣೆಯನ್ನು ಘೋಷಿಸಿದ್ದು, ಇಂದಿನಿಂದಲೇ ಈ ದರ ಜಾರಿಯಲ್ಲಿರಲಿದೆ. ದೇಶೀಯ ಬಳಕೆಗೆ ಬಳಸುವ 14.2 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ? ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 15.50 ರೂ. ಬೆಲೆ ಏರಿಕೆ ಆಗಿದ್ದು, ಪ್ರಸ್ತುತ ಸಿಲಿಂಡರ್ ಬೆಲೆ 1595.50 ರೂ. ಆಗಿದೆ. ಕೋಲ್ಕತ್ತಾದಲ್ಲಿ 16.5 ರೂ. ದರ ಹೆಚ್ಚಳವಾಗಿದ್ದು, 1,700.50 ರೂ. ಬೆಲೆಗೆ ಲಭ್ಯವಿದೆ. ಮುಂಬೈನಲ್ಲಿ 15.50 ರೂ. ಬೆಲೆ ಏರಿಕೆ ಆಗಿದ್ದು, ಸಿಲಿಂಡರ್ ಬೆಲೆ 1,547 ರೂ. ಆಗಿದ್ದು, ಚೆನ್ನೈನಲ್ಲಿ 16.5 ರೂ. ದರ ಹೆಚ್ಚಳವಾಗಿದ್ದು, 1754.50 ರೂ. ಬೆಲೆಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಲಭ್ಯವಿದೆ.

ಗೃಹಬಳಕೆ ಸಿಲಿಂಡರ್‌ಗಳು ದರ ಏರಿಕೆ ಇಲ್ಲ : 14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ದರಗಳಲ್ಲಿ ಏರಿಕೆಯ ಹೊರತಾಗಿಯೂ ದೇಶೀಯ ಅಡುಗೆ ಅನಿಲ ಬೆಲೆಗಳು ಸದ್ಯಕ್ಕೆ ಸ್ಥಿರವಾಗಿವೆ. ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆ ಮಾಡಿರುವುದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ : ‘ದಾಸ’ನಿಗೆ ನರಕವಾಯ್ತು ಕ್ವಾರಂಟೈನ್ ಜೈಲು.. ಹಾಸಿಗೆ, ದಿಂಬು ಕೊಡದಿದ್ರೂ ಪರವಾಗಿಲ್ಲ ಇಲ್ಲಿಂದ ಶಿಫ್ಟ್ ಮಾಡಿ, ನೆಲದಲ್ಲಾದ್ರೂ ಮಲಗ್ತೀನಿ – ದರ್ಶನ್ ಅಳಲು!

Btv Kannada
Author: Btv Kannada

Read More