ಜೈಲು ಪಾಲಾಗಿರುವ ದರ್ಶನ್ ಮೇಲೆ ಹದ್ದಿನ ಕಣ್ಣು.. ಪರಪ್ಪನ ಅಗ್ರಹಾರಕ್ಕೆ ADGP ಬಿ. ದಯಾನಂದ್ ಭೇಟಿ, ಖಡಕ್ ಎಚ್ಚರಿಕೆ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ಕೋರ್ಟ್​ ಸೂಚನೆಯಂತೆ ಸೆ.25ರಂದು ADGP ಬಿ. ದಯಾನಂದ್ ಪರಪ್ಪನ ಅಗ್ರಹಾರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ADGP ಬಿ. ದಯಾನಂದ್ ಅವರು ಆರೋಪಿ ದರ್ಶನ್​ಗೆ ಜೈಲಿನಲ್ಲಿ ನೀಡಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸೆಷನ್ಸ್ ಕೋರ್ಟ್​​ ವಿಚಾರಣೆ ವೇಳೆ ನ್ಯಾಯಾಧೀಶರು, ಜೈಲು ಅಧಿಕಾರಿಗಳಿಗೆ ಖುದ್ದು ಹಾಜರಾಗಿ ಪರಿಶೀಲನೆ ನಡೆಸಬೇಕಾಗಿ ಸೂಚನೆ ನೀಡಿದ್ದರು. ಈ ಹಿನ್ನೆಲೆ ಬಿ. ದಯಾನಂದ್​ ಅವರು ಭೇಟಿ ನೀಡಿ ಕೆಲ ಮಾಹಿತಿ ಸಂಗ್ರಹಿಸಿದ್ದಾರೆ. ಕೋರ್ಟ್ ಸೂಚನೆ ನೀಡಿದ ಮರುದಿನವೇ ಜೈಲಿಗೆ ತೆರಳಿದ ಎಡಿಜಿಪಿ ಬಿ ದಯಾನಂದ್ ಅವರು ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ದರ್ಶನ್ ಸೆಲ್ ಬಳಿ ನಿಯೋಜಿತ ಸಿಬ್ಬಂದಿಯ ಬಾಡಿ ವೋರ್ನ್ ಕ್ಯಾಮೆರಾ ದೃಶ್ಯಾವಳಿಗಳನ್ನ ಎಡಿಜಿಪಿ ದಯಾನಂದ್ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಇನ್ನು ಜೈಲಿನ ಮ್ಯಾನ್ಯುಯಲ್ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಸೌಲಭ್ಯ ನೀಡಲು ಸೂಚನೆ ನೀಡಲಾಗಿದೆ. ನಿಯಮಾವಳಿ ಅನುಸಾರ ನೀಡ್ಬೇಕಾದ ಸವಲತ್ತು ನೀಡಲು ಎಡಿಜಿಪಿ ಬಿ ದಯಾನಂದ್​ ಖಡಕ್​ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಹಾವಳಿ ಹೆಚ್ಚು – ಸಿಎಂಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ!

Btv Kannada
Author: Btv Kannada

Read More