ಬೀದರ್​ನಲ್ಲೊಂದು ಅಮಾನವೀಯ ಘಟನೆ – 6 ವರ್ಷದ ಮಗುವನ್ನು 3ನೇ ಮಹಡಿಯಿಂದ ತಳ್ಳಿ ಕೊಲೆಗೈದ ಮಲತಾಯಿ!

ಬೀದರ್‌ : ಮೂರನೇ ಮಹಡಿಯಿಂದ 6 ವರ್ಷದ ಮಗುವನ್ನ ತಳ್ಳಿ ಮಲತಾಯಿ ಜೀವ ತೆಗೆದಿರುವ ಅಮಾನವೀಯ ಘಟನೆ ಬೀದರ್‌ನ ಆದರ್ಶ ಕಾಲೋನಿಯಲ್ಲಿ ಆಗಸ್ಟ್​ 27ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಾನ್ವಿ ಮೃತ ಬಾಲಕಿ.

20 ವರ್ಷದ ರಾಧ ತನ್ನ 6 ವರ್ಷ ವಯಸ್ಸಿನ ಮಲಮಗಳು ಶಾನ್ವಿಯನ್ನು ಟೆರೇಸ್‌ ಮೇಲಿಂದ ತಳ್ಳಿ ಕೊಲೆ ಮಾಡಿ, ಮಗಳ ಸಾವು ಆಕಸ್ಮಿಕ ಎಂದು ಬಿಂಬಿಸಿದ್ದಳು. ಆದರೆ ಇದೀಗ ಪಕ್ಕದಲ್ಲಿದ ಸಿಸಿಟಿವಿ ಕ್ಯಾಮೆರಾದಲ್ಲಿ ಆಕೆಯ ಕೃತ್ಯ ಸೆರೆಯಾಗಿದ್ದು, ಸದ್ಯ ಕೊಲೆ ಆರೋಪದ ಮೇಲೆ ರಾಧಳನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಶಾನ್ವಿ ತಾಯಿ ಖಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಳು. ಇದಾದ ಬಳಿಕ ಮೃತ ಶಾನ್ವಿ ತಂದೆ ಸಿದ್ಧಾಂತ, 2023ರಲ್ಲಿ ರಾಧಾ ಜೊತೆ 2ನೇ ವಿವಾಹವಾಗಿದ್ದರು. ಸಿದ್ಧಾಂತ ಹಾಗೂ ರಾಧಾಗೆ ಎರಡು ಅವಳಿ ಮಕ್ಕಳು ಹುಟ್ಟಿದ ಬಳಿಕ ಸಿದ್ಧಾಂತರ ಮೊದಲನೇ ಮಗಳು ತಮಗೆ ಹೊರೆಯಾಗ್ತಾಳೆಂದು 2ನೇ ಪತ್ನಿ ಜೀವ ತೆಗೆದಿದ್ದಾಳೆ.

ಇದನ್ನೂ ಓದಿ : ಅರಸಯ್ಯನ ಪ್ರೇಮ ಪ್ರಸಂಗ ಚಿತ್ರದ “ಪೋಸ್ಟ್ ಕಾರ್ಡ್” ಹಾಡು ಬಿಡುಗಡೆ – ಸೆ.19ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Read More