ಆ್ಯಪಲ್‌ ‘ಐಫೋನ್ 17’ ಸಿರೀಸ್​ ಸ್ಮಾರ್ಟ್‌ಫೋನ್‌ಗಳ ಪ್ರಿ ಬುಕಿಂಗ್ ಶುರು.. ಆರ್ಡರ್‌ ಮಾಡೋದು ಹೇಗೆ? ಇಲ್ಲಿದೆ ಡೀಟೆಲ್ಸ್!

ಜಗತ್ತಿನ ನಂಬರ್​ ಒನ್​​ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಆ್ಯಪಲ್‌ ‘ಐಫೋನ್ 17’ ಸಿರೀಸ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದೀಗ ಈ ಸಿರೀಸ್ ಸ್ಮಾರ್ಟ್‌ಫೋನ್‌ಗಳ ಪ್ರಿ ಬುಕಿಂಗ್ ಶುರುವಾಗಿದೆ. ಆ್ಯಪಲ್‌ ಸಂಸ್ಥೆ ನಿನ್ನೆಯಿಂದ (ಸೆ.12) ಐಫೋನ್ 17 ಸರಣಿಯ ಹೊಸ ಸ್ಮಾರ್ಟ್‌ಫೋನ್‌ಗಳ ಪೂರ್ವ-ಬುಕಿಂಗ್ ಅನ್ನು ಪ್ರಾರಂಭಿಸಿದೆ.

ಆ್ಯಪಲ್‌ ಕಂಪನಿಯು ಸೆಪ್ಟೆಂಬರ್ 9ರಂದು ನಡೆದ ವಾರ್ಷಿಕ ಕಾರ್ಯಕ್ರಮ ‘ಓವ್ ಡ್ರಾಪಿಂಗ್’ ನಲ್ಲಿ ಐಫೋನ್ 17 ಸಿರೀಸ್‌ ಬಿಡುಗಡೆ ಮಾಡಿತ್ತು. ಇದರಲ್ಲಿ ಐಫೋನ್ 17, ಐಫೋನ್ ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಸೇರಿವೆ.

ಆರ್ಡರ್‌ ಮಾಡೋದು ಹೇಗೆ? ಈ ಹೊಸ ಐಫೋನ್ ಸರಣಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಆ್ಯಪಲ್‌ ಸ್ಟೋರ್‌ನಿಂದ ಆರ್ಡರ್ ಮಾಡಬಹುದು. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದಲೂ ಪ್ರಿ-ಆರ್ಡರ್‌ಗಳನ್ನು ಮಾಡಬಹುದು. ಇದಲ್ಲದೆ, ಕ್ರೋಮಾ ಮತ್ತು ವಿಜಯ್ ಸೇಲ್ಸ್ ಶಾಪ್ಸ್‌ ಮತ್ತು ವೆಬ್‌ಸೈಟ್‌ಗಳಲ್ಲಿ ಮುಂಗಡ-ಬುಕಿಂಗ್ ಅನ್ನು ಪ್ರಾರಂಭಿಸಿವೆ.

ಐಫೋನ್ 17 ಮತ್ತು ಐಫೋನ್ ಏರ್ ಅನ್ನು ಪ್ರಿ-ಬುಕ್ ಮಾಡಲು, 2000 ರೂ. ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಐಫೋನ್‌ 17 ಪ್ರೊ ಮತ್ತು ಐಫೋನ್‌ 17 ಪ್ರೊ ಮ್ಯಾಕ್ಸ್‌ ಗಾಗಿ ಬುಕಿಂಗ್ ಮೊತ್ತವನ್ನು 17000 ರೂ.ಗಳಲ್ಲಿ ಇರಿಸಲಾಗಿದೆ. ಆ್ಯಪಲ್‌ ವಾಚ್‌ ಸಿರೀಸ್‌ 11, ಆ್ಯಪಲ್‌ ವಾಚ್‌ ಅಲ್ಟ್ರಾ 3, ಆ್ಯಪಲ್‌ ವಾಚ್‌ SE 3 ಮತ್ತು ಏರ್‌ಪಾಡ್ಸ್‌ 3 ಗಾಗಿ ಬುಕಿಂಗ್ ಮೊತ್ತವನ್ನು 2,000 ರೂ.ಗಳಲ್ಲಿ ಇರಿಸಲಾಗಿದೆ. ಎಲ್ಲಾ ಮಾಡೆಲ್‌ಗಳ ಮಾರಾಟ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ : ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ.. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ!

Btv Kannada
Author: Btv Kannada