ಹೆಂಡತಿ, ಮಕ್ಕಳು ಬಿಟ್ಟು ಹೋಗಿದ್ದಕ್ಕೆ ನದಿಗೆ ಹಾರಿದ ಪತಿ – ದೃಶ್ಯ ಮೊಬೈಲ್‌ನಲ್ಲಿ ಸೆರೆ!

ಬೀದರ್ : ತನ್ನ ಹೆಂಡತಿ ಮತ್ತು ಮಕ್ಕಳು ಬಿಟ್ಟು ಹೋಗಿದ್ದಕ್ಕೆ ಬೇಸರಗೊಂಡಿದ್ದ ವ್ಯಕ್ತಿಯೊಬ್ಬ ನದಿಗೆ ಹಾರಿರುವ ಘಟನೆ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ. ಹಲಸಿತೂಗಾಂವ್ ಗ್ರಾಮದ ನಿವಾಸಿ 38 ವರ್ಷದ ಪ್ರಭಾಕರ್ ಸೂರ್ಯವಂಶಿ ನದಿಗೆ ಹಾರಿದ ವ್ಯಕ್ತಿ.

ಕೆಲವು ವರ್ಷಗಳ ಹಿಂದೆ ಪ್ರಭಾಕರ್ ಅವರನ್ನು ಅವರ ಪತ್ನಿ ಮತ್ತು ಮಕ್ಕಳು ಬಿಟ್ಟು ಹೋಗಿದ್ದರು. ಇದರಿಂದ ಬೇಸರಗೊಂಡ ಪ್ರಭಾಕರ್ ಅವರು, ಮಾನಸಿಕವಾಗಿ ಕುಗ್ಗಿ ಕುಡಿತಕ್ಕೆ ದಾಸರಾಗಿದ್ದರು. ನದಿಗೆ ಹಾರಿದ ಪ್ರಭಾಕರ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸಂಬಂಧ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಭಾಕರ್ ಅವರು ಸೇತುವೆಯ ಮೇಲಿಂದ ನದಿಗೆ ಹಾರುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ : ಟೇಕಾಫ್‌ ವೇಳೆ ಕಳಚಿದ ಸ್ಪೈಸ್‌ಜೆಟ್ ಚಕ್ರ – ಮುಂಬೈನಲ್ಲಿ ಸೇಫ್‌ ಲ್ಯಾಂಡಿಂಗ್‌!

Btv Kannada
Author: Btv Kannada

Read More