ಮುಂಬೈ : ಕಾಂಡ್ಲಾದಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಚಕ್ರ ಟೇಕಾಫ್ ಆಗುವಾಗ ಕಳಚಿ ಬಿದ್ದದ್ದು, ಈ ಹಿನ್ನೆಲೆ ವಿಮಾನ ಮುಂಬೈಗೆ ಪ್ರಯಾಣಬೆಳೆಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಸ್ಪೈಸ್‌ಜೆಟ್ Q400 ವಿಮಾನ 75 ಪ್ರಯಾಣಿಕರನ್ನು ಹೊತ್ತು ಇಂದು ಮಧ್ಯಾಹ್ನ 2:39ಕ್ಕೆ ಕಾಂಡ್ಲಾ ವಿಮಾನ ನಿಲ್ದಾಣದ ರನ್‌ವೇ 23 ರಿಂದ ಟೇಕಾಫ್ ಆಗಿತ್ತು. ಈ ವೇಳೆ ವಿಮಾನದಿಂದ ಕಪ್ಪು ಬಣ್ಣದ ದೊಡ್ಡ ವಸ್ತು ಬೀಳುತ್ತಿರುವುದು ಕಾಣಿಸಿತ್ತು. ಪರಿಶೀಲನೆ ನಡೆಸಿದಾಗ ಅದು ವಿಮಾನದ ಚಕ್ರ ಎಂದು ತಿಳಿದುಬಂದಿತ್ತು. ಸ್ಪೈಸ್ ಜೆಟ್ ಈ ಘಟನೆಯನ್ನು ದೃಢಪಡಿಸಿದೆ.
ವಿಮಾನವು ಮುಂಬೈ ತಲುಪುತ್ತಿದ್ದಂತೆ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ, ಲ್ಯಾಂಡ್ ಮಾಡಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ : ಮೈಸೂರು : ಹಣದ ಆಸೆಗಾಗಿ ಗಂಡನನ್ನೇ ಕೊಲೆಗೈದು ತೋಟದಲ್ಲಿ ದೇಹ ಹೂತಿಟ್ಟ ಪತ್ನಿ!
Author: Btv Kannada
Post Views: 586







