ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ‘ಪೋಥಿಸ್’ ಬಟ್ಟೆ ಶೋ ರೂಮ್​ಗಳ ಮೇಲೆ IT ದಾಳಿ!

ಬೆಂಗಳೂರು : ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬಟ್ಟೆ ರೂಮ್ ‘ಫೋಥಿಸ್’ ಮಳಿಗೆಗಳ ಮೇಲೆ ಇಂದು ಬೆಳ್ಳಂಬೆಳ್ಳಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರು ರಸ್ತೆಯ ಟೆಂಬರ್ ಲೇಔಟ್, ಗಾಂಧಿನಗರದ ಅತೀ ದೊಡ್ಡ ಶೋ ರೂಮ್​ ಮೇಲೆ ಐಟಿ ರೇಡ್​ ನಡೆದಿದೆ.

50ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ಪ್ರತ್ಯೇಕ ತಂಡವಾಗಿ ಪೋಥಿಸ್ ಮಳಿಗೆ ಮೇಲೆ ದಾಳಿ ನಡೆಸಲಾಗಿದೆ. ಗಾಂಧಿನಗರದಲ್ಲಿರುವ ಪೋಥಿಸ್ ಬಟ್ಟೆ ಮಳಿಗೆ ಮೇಲೆ 30 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಟೆಂಬರ್ ಲೇಔಟ್‌ನಲ್ಲಿರುವ ಪೋಥಿಸ್ ಮಳಿಗೆ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ರೇಡ್​ ಮಾಡಿದೆ. ನಗದು ವಹಿವಾಟು, ಆನ್‌ಲೈನ್ ವಹಿವಾಟು, ಮಳಿಗೆಯಲ್ಲಿರುವ ಬಟ್ಟೆಗಳು, ಮೌಲ್ಯ ಸೇರದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ವ್ಯಾಪಾರ ವ್ಯವಹಾರ ಮಾಡುತ್ತಿರುವ ಪೋಥಿಸ್ ಮಳಿಗೆ ತಮಿಳುನಾಡಿನ ಉದ್ಯಮಿಗೆ ಸೇರಿದೆ. ಚೆನ್ನೈ, ಮಧುರೈ ಸೇರಿದಂತೆ ತಮಿಳುನಾಡಿನಲ್ಲಿ ಅತೀ ದೊಡ್ಡ ಉದ್ಯಮವಾಗಿ ಬೆಳೆದಿದೆ. ಬಳಿಕ ಹಂತ ಹಂತವಾಗಿ ಇತರ ರಾಜ್ಯಗಳಿಗೆ ವಿಸ್ತರಣೆಯಾಗಿದೆ. ಇದೀಗ ಪೋಥಿಸ್ ವಿರುದ್ದ ಭಾರೀ ಪ್ರಮಾಣದಲ್ಲಿ ಆದಾಯ ತೆರಿಗೆ ವಂಚಿಸಿದ ಆರೋಪ ಕೇಳಿಬಂದಿರುವ ಭಾಗವಾಗಿ ಚೆನ್ನೈನಿಂದ ಐಟಿ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ವಾಹನ ಸವಾರರೇ ಗಮನಿಸಿ.. ಶೇ.50 ರಷ್ಟು ಡಿಸ್ಕೌಂಟ್​​ನೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಸಲು ಇಂದೇ ಲಾಸ್ಟ್ ಡೇಟ್!

Btv Kannada
Author: Btv Kannada

Read More