ಬಾಗಲಕೋಟೆ : ಅನಾರೋಗ್ಯದಿಂದ ಮನನೊಂದು ಮಹಿಳೆ ಆತ್ಮಹತ್ಯೆ!

ಬಾಗಲಕೋಟೆ : ಅನಾರೋಗ್ಯದಿಂದ ಮನನೊಂದು ಮಹಿಳೆಯೊಬ್ಬರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದಲ್ಲಿ ನಡೆದಿದೆ.

ಸಾವಳಗಿ ಗ್ರಾಮದ 45 ವಯಸ್ಸಿನ ಶೋಭಾ ಮಹಾದೇವ ಅಕ್ಕಿವಾಡ ಮೃತ ದುರ್ದೈವಿ. ಸ್ಥಳೀಯರು ವಾಯುವಿಹಾರಕ್ಕೆ ಬಂದಾಗ ಕೆರೆಯಲ್ಲಿ ಮೃತದೇಹ ಇರುವುದನ್ನು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವ ಪರೀಕ್ಷೆಗಾಗಿ ಮೃತದೇಹವನ್ನು ಜಮಖಂಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೃತ ಶೋಭಾ ಮಹಾದೇವ ಹಲವು ವರ್ಷಗಳಿಂದ ತನ್ನ ಮಗನ ಜೊತೆಗೆ ಕೊಲಿ ಕೆಲಸ ಮಾಡಿಕೊಂಡು ಜೀವನೋಪಾಯ ಸಾಗಿಸುತ್ತಿದ್ದಳು ಎನ್ನಲಾಗ್ತಿದೆ.

ಇದನ್ನೂ ಓದಿ : ಗಣೇಶ ವಿಸರ್ಜನೆ ವೇಳೆ 2 ಕುಟುಂಬಗಳ ನಡುವೆ ಮಾರಾಮಾರಿ – ನಿಯಂತ್ರಿಸಲು ಹೋದ ಪೊಲೀಸ್ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು!

Btv Kannada
Author: Btv Kannada

Read More