ಗಣೇಶ ವಿಸರ್ಜನೆ ವೇಳೆ 2 ಕುಟುಂಬಗಳ ನಡುವೆ ಮಾರಾಮಾರಿ – ನಿಯಂತ್ರಿಸಲು ಹೋದ ಪೊಲೀಸ್ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು!

ರಾಯಚೂರು : ಗಣೇಶ ವಿಸರ್ಜನೆ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಾಗ ನಿಯಂತ್ರಿಸಲು ಹೋದ PSI ಕಣ್ಣಿಗೆ ಖಾರದ ಪುಡಿ ಎರಚಿರುವ ಘಟನೆ ನಗರದ ಗದ್ವಾಲ ರಸ್ತೆಯ ವೀರಾಂಜನೇಯ ದೇವಸ್ಥಾನ ಬಳಿ ಘಟನೆ ನಡೆದಿದೆ.

ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದ್ದು, ಕೈಯಲ್ಲಿ ಖಾರದ ಪುಡಿ ಹಿಡಿದು ಕಲ್ಲು, ಬೆತ್ತಗಳಿಂದ ಮಾರಾಮಾರಿ ನಡೆದಿದೆ. ಸ್ಥಳದಲ್ಲಿ ಹತ್ತಾರು ಜನ ಪೊಲೀಸರಿದ್ದರೂ ಗಲಾಟೆ ನಡೆದಿದೆ.

ಈ ವೇಳೆ ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಹೊಡೆದಾಟದಲ್ಲಿ ಎರಡು ಕುಟುಂಬದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ : ರಾಜಕೀಯಕ್ಕೆ ಬರುವ ಯಾವ ಆಲೋಚನೆಯೂ ಇಲ್ಲ – ಕಿಚ್ಚ ಸುದೀಪ್ ಸ್ಪಷ್ಟನೆ!

Btv Kannada
Author: Btv Kannada

Read More