ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ದಿಢೀರ್ ಸುದ್ದಿಗೋಷ್ಠಿ ನಡೆಸಿ, ಹುಟ್ಟುಹಬ್ಬ ಆಚರಣೆ ಮತ್ತು ಇತರ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ರಾಜಕೀಯ ಎಂಟ್ರಿ ಬಗ್ಗೆಯೂ ಪ್ರತಿಕ್ರಿಯಿಸಿ, ರಾಜಕೀಯಕ್ಕೆ ಬರುವ ಯಾವ ಯೋಚನೆಯೂ ನನ್ನ ಬಳಿ ಇಲ್ಲ, ಕೆಲವರು ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮಾಡ್ತಾರೆ. ಈಗ ಸಿದ್ದರಾಮಯ್ಯ ಅವರಿಗೆ ಅವರದ್ದೇ ಅದ ತಲೆನೋವುಗಳಿವೆ, ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಲೋಚನೆ ಇರಲ್ಲ. ನನ್ನ ಕೆಲವು ಕಾರ್ಯಕ್ರಮಗಳಿಗಾಗಿ ಸಿದ್ದರಾಮಯ್ಯ ಭೇಟಿ ಮಾಡ್ತಿನಿ ಎಂದು ನಟ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇದೇ ವೇಳೆ ಡಿಸಿಎಂ ಡಿಕೆಶಿ ನಟ್ಟು-ಬೋಲ್ಟ್ ವಿಚಾರ ಸಂಬಂಧ ಸುದೀಪ್ ಮಾತನಾಡಿ, ನಟ್ಟು ಬೋಲ್ಟ್ ವಿಚಾರದಲ್ಲಿ ಡಿಕೆಶಿ ಸಾಹೇಬ್ರುದು ಏನೂ ಇಲ್ಲ. ಈ ಎಲ್ಲಾ ಕಿತಾಪತಿ ಸಾಧುಕೋಕಿಲ ಅವರದ್ದು, ಸಾಧುದು ಪಾಪ ತಪ್ಪಿಲ್ಲ. ಸಾಧುಕೋಕಿಲ ಅವರು ಯಾವಾಗಲೂ ಕಾಮಿಡಿ ಮಾಡ್ತಾನೆ ಇರ್ತಾರೆ, ಅದ್ರೆ ಆ ವಿಚಾರ ಸೀರಿಯಸ್ ಆಗಿ ಹೋಗಿದೆ ಅಷ್ಟೇ ಎಂದಿದ್ದಾರೆ.
ಯಾರ್ಯಾರನ್ನು ವೈಯುಕ್ತಿಕವಾಗಿ ಕರೆದಿದ್ದಾರೋ ಅವರೆಲ್ಲಾ ಹೋಗಿದ್ದಾರೆ, ಕರೆಯದಿದ್ದರೇ ಯಾರು ತಾನೇ ಹೋಗುತ್ತಾರೆ. ದರ್ಶನ್ ಅಭಿನಯದ ʼಡೆವಿಲ್ʼ ಚಿತ್ರಕ್ಕೆ ಒಳ್ಳೆಯದಾಗಲಿ, ಎಲ್ಲ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣಬೇಕು ಎನ್ನುವುದೇ ಆಶಯ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಮಾತನಾಡಲು ನನಗೆ ಆಸಕ್ತಿ ಇಲ್ಲ. ದರ್ಶನ್ ನೋವು ಅವರಿಗಿರುತ್ತದೆ. ಅವರ ಅಭಿಮಾನಿಗಳು ನೋವಿನಲ್ಲಿದ್ದಾರೆ, ದರ್ಶನ್ ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಈ ಸಮಯದಲ್ಲಿ ನಾವು ಮಾತನಾಡಿದರೆ ತಪ್ಪಾಗುತ್ತದೆ, ಮಾತನಾಡಬಾರದು. ಕಾನೂನು ಏನು ಮಾಡಬೇಕೊ ಅದು ಮಾಡುತ್ತೆ, ತಪ್ಪು ಸರಿ ನಿರ್ಧಾರವಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ : ಸುಳ್ಳು ಸುದ್ದಿ ಹಬ್ಬಿಸಿದ ಆರೋಪ – ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೊಂದು FIR!







