ನವದೆಹಲಿ : ಬರೋಬ್ಬರಿ 7 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ (SCO) ಶೃಂಗಸಭೆ ಹಿನ್ನೆಲೆಯಲ್ಲಿ ಟಿಯಾಂಜಿನ್ ತಲುಪಿದ್ದಾರೆ.

ಈಗಾಗಲೇ ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಚೀನಾದಲ್ಲಿರುವ ಭಾರತೀಯರು ತ್ರಿವರ್ಣ ಧ್ವಜವನ್ನು ಬೀಸುತ್ತಾ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದಾರೆ.

ಇವತ್ತಿನಿಂದ ಎರಡು ದಿನಗಳ ಕಾಲ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆ ನಡೆಯಲಿದೆ. ಚೀನಾ ತಲುಪುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಮೋದಿ ಅಲ್ಲಿನ ಅಪ್ಡೇಟ್ಸ್ ನೀಡಿದ್ದಾರೆ. ‘ನಾನು ಟಿಯಾಂಜಿನ್ ತಲುಪಿದ್ದೇನೆ. SCO ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಆಳವಾದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಿನ ಭೇಟಿಯ ಮೇಲೆ ವಿಶ್ವದ ಕಣ್ಣು ನೆಟ್ಟಿದೆ. ಏಳು ವರ್ಷಗಳ ನಂತರ ಇಬ್ಬರು ನಾಯಕರು ಇವತ್ತು ಮುಖಾಮುಖಿ ಆಗುತ್ತಿದ್ದಾರೆ. ಇಬ್ಬರ ನಡುವಿನ ಮಾತುಕತೆಗಳು ಭಾರತ-ಚೀನಾ ಸಂಬಂಧಗಳನ್ನು ಪರಿಶೀಲಿಸುತ್ತವೆ. ವ್ಯಾಪಾರ ಮತ್ತು ಗಡಿ ವಿವಾದಗಳ ಭವಿಷ್ಯದ ಸ್ಥಿತಿಯನ್ನು ಚರ್ಚಿಸುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ ನಿಂದನೆ – ಕೆಂಗೇರಿ ಪೊಲೀಸರಿಂದ ಅರ್ಚಕ ಗುರುರಾಜ್ ಬಂಧನ!







