ಬೆಂಗಳೂರು : ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಮತ್ತೆಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ದರ್ಶನ್ ಸೇರಿ ಉಳಿದ ಆರೋಪಿಗಳಿಗೆ ಕೈದಿ ನಂಬರ್ ಅನ್ನು ನೀಡಲಾಗಿದೆ.
ಆರೋಪಿ ನಟ ದರ್ಶನ್ಗೆ ವಿಚಾರಣಾಧೀನ ಕೈದಿ ನಂಬರ್ 7314, ಪವಿತ್ರಾ ಗೌಡ ಕೈದಿ ನಂಬರ್ 7313, ನಾಗರಾಜ್ ಕೈದಿ ನಂಬರ್ 7315, ಲಕ್ಷಣ್ ಕೈದಿ ನಂಬರ್ 7316, ಪ್ರದೂಷ್ಗೆ ಕೈದಿ ನಂಬರ್ 7317 ನೀಡಲಾಗಿದೆ.
ದರ್ಶನ್ಗೆ ಮತ್ತೆ ಬೆನ್ನು ನೋವು : ನಟ ದರ್ಶನ್ ಮತ್ತೆ ಜೈಲುಪಾಲಗಿ ಒಂದು ದಿನ ಕಳೆದಿದೆ. ಈ ಬೆನ್ನಲ್ಲೇ ನಟನಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಜೈಲಿನಲ್ಲಿ ಈ ಬಗ್ಗೆ ಅವರು ಅಳಲನ್ನು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರಪ್ಪನ ಅಗ್ರಹಾರದ ಜೈಲಿನ ಅಡ್ಮಿಷನ್ನ ಒಂದೇ ಬ್ಯಾರಕ್ನಲ್ಲಿ ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೂಶ್ ಸೇರಿ ಎಲ್ಲಾ ಆರೋಪಿಗಳಿದ್ದು, ರಾತ್ರಿ ಊಟಕ್ಕೆ ಜೈಲಾಧಿಕಾರಿಗಳು ಮುದ್ದೆ, ಚಪಾತಿ, ಅನ್ನ ಸಾಂಬಾರ್ ನೀಡಿದ್ದಾರೆ.
A1 ಆರೋಪಿ ಪವಿತ್ರಾ ಗೌಡ ಅವರು ಮಹಿಳಾ ಬ್ಯಾರಕ್ನಲ್ಲಿದ್ದು, ಯಾರ ಜೊತೆಯೂ ಮಾತನಾಡಿಲ್ಲ. ಮೌನಕ್ಕೆ ಶರಣಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿಯೂ ಊಟ ಮಾಡದೇ, ಬೆಳಗಿನ ಜಾವದವರೆಗೂ ಅವರು ಚಡಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟ – ಮೂರು ಮನೆಗಳು ಛಿದ್ರ ಛಿದ್ರ.. 7 ಮಂದಿಗೆ ಗಂಭೀರ ಗಾಯ!







