ಕಾಫಿನಾಡು ಚಂದು, ಸೈಕ್​ ನವಾಜ್​​, ಅಮುಕುಡುಮುಕು ಪ್ರಚಾರ ಮಾಡಿದ್ರೆ ನೋ ಯೂಸ್.. ‘ಸು ಫ್ರಮ್ ಸೋ’ ಗೆಲುವಿನ ಗುಟ್ಟು ರಟ್ಟು ಮಾಡಿದ ಪ್ರೇಕ್ಷಕ!

‘ಸು ಫ್ರಮ್​​ ಸೋ‘ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ನಿರ್ಮಾಣದ ಈ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗಿದ್ದು, ಮೂರೇ ದಿನಕ್ಕೆ 6 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಮಾಹಿತಿ ಕೂಡ ಇದೆ. ​ಬಹುತೇಕ ಎಲ್ಲಾ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದ್ದು, ಸ್ಯಾಂಡಲ್​ವುಡ್​ನಲ್ಲಿ ಬಹು ಸಮಯದ ಬಳಿಕ ಒಂದೊಳ್ಳೆಯ ಸಿನಿಮಾ ನೋಡಿದ ಪ್ರೇಕ್ಷಕರು ‘ಸು ಫ್ರಮ್​​ ಸೋ’ ಚಿತ್ರತಂಡಕ್ಕೆ ಜೈಕಾರ ಹಾಕುತ್ತಿದ್ದಾರೆ.

ಇನ್ನು ‘ಸು ಫ್ರಮ್ ಸೋ’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹುಚ್ಚರಂತೆ ಆಡುವವರನ್ನೇ ಸೆಲೆಬ್ರೆಟಿ ರೀತಿಯಂತೆ ಕೆಲವು ಜನ ಭಾವಿಸಿದ್ದರು. ಸಾಮಾನ್ಯ ವರ್ತನೆಗಿಂತ ಬೇರೆ ರೀತಿಯಲ್ಲಿ ವರ್ತಿಸುವವರನ್ನು ಕರೆ ತಂದು ಸಿನಿಮಾ, ಅಂಗಡಿ, ಶೋ ರೂಮ್​​ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಆಹ್ವಾನಿಸಿ ಪ್ರಚಾರ ಪಡೆಯುತ್ತಿದ್ದರು.

ಉದಾಹರಣೆಗೆ ಕಾಫಿ ನಾಡು ಚಂದು, ಸೈಕ್​ ನವಾಜ್​​, ಅಮುಕು ಡುಮುಕು ಸೇರಿ ಹಲವರನ್ನು ಕರೆತಂದು ಸಿನಿಮಾ, ಕಾರ್ಯಕ್ರಮ ಪಮೋಶನ್​ ಮಾಡಿಸುತ್ತಿದ್ದರು. ಆದ್ರೆ, ಇಂತಹ ಯಾವುದೇ ವಿಚಾರಗಳಿಗೂ ತಲೆ ಹಾಕದ ‘ಸು ಫ್ರಮ್ ಸೋ’ ಸಿನಿಮಾ ತಂಡ ಕೇವಲ ಪವರ್​ಫುಲ್​ ಕಥೆ ಮೂಲಕ ಜನರ ಮನಸ್ಸಿಗೆ ಲಗ್ಗೆ ಇಟ್ಟಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್​ ಕುಮಾರ್​​ ಮಾವೀನಕಡು ಎಂಬುವವರು ಸಂಪ್ರದಾಯಿಕ ಪ್ರಚಾರದ ಹೊರಗೆ ಹೇಗೆ ಸಿನಿಮಾ ಸಕ್ಸಸ್​ ಆಯ್ತು ಅನ್ನೋದ್ರ ಬಗ್ಗೆ ಸವಿವರವಾಗಿ ಬರೆದಿದ್ದಾರೆ.

https://www.facebook.com/praveenkumar.mavinakadu
https://www.facebook.com/praveenkumar.mavinakadu

ಪ್ರವೀಣ್​ ಕುಮಾರ್​​ ಮಾವೀನಕಡು ಪೋಸ್ಟ್​ ಹೀಗಿದೆ : ಅದ್ಯಾವುದೋ ‘ಸು ಫ್ರಮ್​​ ಸೋ’ ಅನ್ನೋ ಹೆಸರಿನ ಕನ್ನಡ ಸಿನಿಮಾ ಒಂದು ಸೂಪರ್ ಹಿಟ್ ಆಗ್ತಿದೆ ಅನ್ನೋ ಮಾತುಗಳು ಜೋರಾಗಿ ಕೇಳಿಬರ್ತಾ ಇದೆ. ಅದು ಹೇಗೆ ಸಾಧ್ಯ? ಸೈಕ್ ನವಾಜನ ಒಂದೇ ಒಂದು ಪ್ರಾಸಬದ್ಧ ರಿವ್ಯೂ ಇಲ್ಲ. ಸಿನಿಮಾ ತಂಡದವರ ಮುಂದೆ ಅಮುಕುಡುಮುಕು ಅನ್ನುವವನ ಒಂದೇ ಒಂದು ಡೈಲಾಗ್ ಇಲ್ಲ. ಕಾಫಿನಾಡು ಚಂದುವಿನ ಶುಭ ಹಾರೈಕೆಯಿಲ್ಲ. ಮಾತಿಗೊಮ್ಮೆ #ಅಹ ಎಂದು ಮುಖ ತಿರುಗಿಸುವವನ(ಳ) ಆಕ್ರೋಶಭರಿತ ಮೆಚ್ಚುಗೆಯಿಲ್ಲ. ಇಷ್ಟಾಗಿಯೂ ‘ಸು ಫ್ರಮ್​ ಸೋ’ ಗೆಲ್ಲುತ್ತಿರುವುದು ಹೇಗೆ? ಬಹುಶಃ ಚಿತ್ರತಂಡದವರೇ ಸುಳ್ಳು ಹೇಳುತ್ತಿರಬಹುದು. ಅಥವಾ ಈ ಸೆಲೆಬ್ರಿಟಿಗಳಿಂದ ರಿವ್ಯೂ ಹೇಳಿಸಿದರೆ ಚಿತ್ರ ಗೆಲ್ಲುತ್ತದೆ ಎನ್ನುವ ಕನ್ನಡ ಚಿತ್ರರಂಗದ ನಂಬಿಕೆಯೇ ಸುಳ್ಳಾಗಿರಬಹುದು. ಎರಡರಲ್ಲಿ ಯಾವುದು ಸತ್ಯ? ಎಂದು ಜನರಿಗೆ ಪ್ರಶ್ನೆ ಇಟ್ಟಿದ್ದಾರೆ.

ಇದನ್ನೂ ಓದಿ : ‘ದಿ ಡೆವಿಲ್’ ಶೂಟಿಂಗ್​​, ಡಬ್ಬಿಂಗ್ ಕಂಪ್ಲೀಟ್.. ​​ಸಿನಿಮಾ ರಿಲೀಸ್​ ಯಾವಾಗ?

 

 

 

 

 

 

Btv Kannada
Author: Btv Kannada

Read More