ಸೋಶಿಯಲ್ ಮಿಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ, ಬಿಗ್ ಬಾಸ್ ಅಂಗಳಕ್ಕೂ ತಲುಪಿದ್ದರು. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮೂಲಕ ಮತ್ತಷ್ಟು ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರು ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪದ ಮೇಲೆ ನಿನ್ನೆ ಅರೆಸ್ಟ್ ಆಗಿದ್ದರು. ಹೆಚ್ಚಿನ ವಿಚಾರಣೆಗಾಗಿ ಸೋನು ಶ್ರೀನಿವಾಸ್ ಗೌಡ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸಿಜೆಎಂ ಕೋರ್ಟ್ ಆದೇಶ ನೀಡಿತ್ತು.
ಇದೀಗ ಕಾನೂನು ಮೀರಿ ಬಾಲಕಿಯನ್ನು ದತ್ತು ಪಡೆದಿರುವ ಆರೋಪದಲ್ಲಿ ಅರೆಸ್ಟ್ ಆಗಿರುವ ರೀಲ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರನ್ನು ಇಂದು ರಾಯಚೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ದತ್ತು ಪಡೆದಿದ್ದಾರೆ ಎನ್ನಲಾದ ಮಗುವಿನ ಪೋಷಕರ ಎದುರಲ್ಲೇ ಹೇಳಿಕೆ ಪಡೆಯಲು ಪೊಲೀಸರು ಸಜ್ಜಾಗಿದ್ದಾರೆ.
ನಿನ್ನೆ ಸೋನುಗೌಡರನ್ನು 4 ದಿನಗಳ ಕಾಲ ಬ್ಯಾಡರಹಳ್ಳಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಸೋನು ಶ್ರೀನಿವಾಸ್ ಗೌಡ ವಿರುದ್ಧ ಬಾಲ ನ್ಯಾಯ ಕಾಯ್ದೆ, ಹಿಂದೂ ದತ್ತು ಕಾಯ್ದೆಯ ಉಲ್ಲಂಘನೆಯಡಿ ಬ್ಯಾಡರಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ. ಮಗುವನ್ನು ಹೇಗೆ ದತ್ತು ಪಡೆಯಲಾಗಿದೆ. ಹಣ ಸೇರಿ ಏನಾದ್ರೂ ಕೊಟ್ಟಿದ್ದಾರಾ ಅನ್ನೋ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹ ಮಾಡಲಿದ್ದಾರೆ.
ಇದನ್ನೂ ಓದಿ : ರಷ್ಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ 70 ಬ*ಲಿ, 150 ಮಂದಿಗೆ ಗಾಯ – ಹಲವರ ಸ್ಥಿತಿ ಗಂಭೀರ..!