Download Our App

Follow us

Home » ಅಂತಾರಾಷ್ಟ್ರೀಯ » ರಷ್ಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ 70 ಬ*ಲಿ, 150 ಮಂದಿಗೆ ಗಾಯ – ಹಲವರ ಸ್ಥಿತಿ ಗಂಭೀರ..!

ರಷ್ಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ 70 ಬ*ಲಿ, 150 ಮಂದಿಗೆ ಗಾಯ – ಹಲವರ ಸ್ಥಿತಿ ಗಂಭೀರ..!

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆದಿದ್ದು, ಉಗ್ರರ ಅಟ್ಟಹಾಸಕ್ಕೆ ಭಾರೀ ಸಾವುನೋವು ಸಂಭವಿಸಿದೆ. ಈ ಭಯಾನಕ ಘಟನೆಯಲ್ಲಿ 70 ಮಂದಿ ಸಾವನ್ನಪ್ಪಿದ್ದು, 150 ಮಂದಿಯ ಸ್ಥಿತಿ ಗಂಭೀರವಾಗಿದೆ.

ಮಾಸ್ಕೋದ  6200 ಜನರ ಸಾಮರ್ಥ್ಯದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ಪಿಕ್ನಿಕ್​​​​ ರಾಕ್​ ಟೀಂ ವತಿಯಿಂದ ಸಂಗೀತ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಸಾವಿರಕ್ಕೂ ಹೆಚ್ಚು ಜನ ಅಲ್ಲಿ ನೆರೆದಿದ್ದರು. ಈ ವೇಳೆ ಬಿಳಿ ಬಣ್ಣದ ಕಾರ್​​ನಲ್ಲಿ ಬಂದಿದ್ದ ಉಗ್ರರ ತಂಡವು  ಮನಸೋ ಇಚ್ಚೆ ದಾಳಿ ನಡೆಸಿದ್ದಾರೆ.

ದಾಳಿಯ ರಭಸಕ್ಕೆ ಜನರು ಭಯಗೊಂಡು ದಿಕ್ಕಾಪಾಲಾದ ಪರಿಣಾಮ ಕಾಲ್ತುಳಿತ ಉಂಟಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಲಿದೆ. ಇನ್ನು ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಹಾಲ್‌ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಹೊಣೆಯನ್ನು ಇರಾಕ್ ಮತ್ತು​​ ಸಿರಿಯಾದಲ್ಲಿರುವ ISIS ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇನ್ನು ಭಯೋತ್ಪಾದಕ ದಾಳಿ ಬಗ್ಗೆ ಅಮೆರಿಕವು ರಷ್ಯಾಕ್ಕೆ ಮಾರ್ಚ್​​ 7ರಂದೇ ಮುನ್ಸೂಚನೆಯನ್ನು ನೀಡಿತ್ತು. ಈ ದಾಳಿಯ ಹಿಂದೆ ಪಾಕಿಸ್ತಾನ್​​, ಆಫ್ಘನ್​​, ಟರ್ಕಿ, ತಜಕಿಸ್ತಾನ್​​ನ ISIS ಲಿಂಕ್​​​​ ಇರುವ ಶಂಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಯೋಗರಾಜ್ ಭಟ್ರ RCB ‘ಜಿಂಗಲ ಜೈ’ ಹಾಡು ಹಾಡಿ ಕುಣಿದು ಕುಪ್ಪಳಿಸಿದ ಧ್ರುವ ಸರ್ಜಾ..! 

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here