ನೆಲಮಂಗಲ : ಬೆಂಗಳೂರು ಹೊರ ವಲಯದ ನೆಲಮಂಗಲದಲ್ಲಿ ಕುಡಿದು ರಸ್ತೆ ಮಧ್ಯೆ ಮಲಗಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬರು ರಸ್ತೆ ಪಕ್ಕಕ್ಕೆ ತಂದು ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ನೆಲಮಂಗಲ ನಗರದ ವೀವರ್ಸ್ ಕಾಲೋನಿ ಬಳಿ ರಸ್ತೆಯಲ್ಲಿ ಕುಡಿದು ವ್ಯಕ್ತಿ ಒದ್ದಾಡುತ್ತಿದ್ದ. ಸಲ್ಪ ಯಾಮಾರಿದ್ರೂ ವಾಹನಗಳ ಚಕ್ರಕ್ಕೆ ಸಿಲುಕುತ್ತಿದ್ದ. ಆತನನ್ನು ನೋಡದೇ ನೂರಾರು ವಾಹನ ಸವಾರರು ಓಡಾಡುತ್ತಿದ್ದರು. ಸ್ಕೂಟರ್ನಲ್ಲಿ ತೆರಳುತ್ತಿದ್ದ ಮಹಿಳೆ ಮಾನವೀಯತೆ ಮೆರೆದು ವ್ಯಕ್ತಿಯನ್ನು ಪಾರು ಮಾಡಿದ್ದಾರೆ. CCTV ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪರಿಚಿತರಾದರೂ ಸಹಾಯ ಮಾಡಿ ಮಹಿಳೆ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ : 1 ಕೋಟಿ ದಾಟಿದ ಹಂಪಿ ವಿವಿಯ ಕರೆಂಟ್ ಬಿಲ್..
Post Views: 790