ವಿಜಯನಗರ : ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬರೆಯ ಮೇಲೆ ಬರೆ ಎಳೆದಂತಾಗಿದೆ. ಕರೆಂಟ್ ಬಿಲ್ ಕೋಟಿ ದಾಟಿದ್ದು, ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುತ್ತಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಸಂಶೋಧನೆಗಾಗಿ ಜನ್ಮ ತಾಳಿರುವ ಏಕೈಕ ವಿಶ್ವವಿದ್ಯಾಲಯ. ಈ ವಿವಿಗೆ ಅನುದಾನ ಸರಿಯಾಗಿ ಬಾರದ ಕಾರಣ ಹಿಂದಿನ ಕರೆಂಟ್ ಬಿಲ್ ಸಹ ಕಟ್ಟಿರಲಿಲ್ಲ. ಇದೀಗ ಹಿಂದಿನ ಬಾಕಿ ಮೊತ್ತವನ್ನು ಸೇರಿಸಿದಂತೆ ಇಲ್ಲಿವರೆಗಿನ ಒಟ್ಟು ವಿದ್ಯುತ್ ಬಿಲ್ 1 ಕೋಟಿ, 3 ಲಕ್ಷದ 59 ಸಾವಿರದ 586ರೂ.ಗಳಷ್ಟಾಗಿದ್ದು, ಹಂಪಿ ವಿಶ್ವವಿದ್ಯಾಲಯ ಸಂಕಷ್ಟಕ್ಕೆ ಸಿಲುಕಿದೆ.
ಕರೆಂಟ್ ಬಿಲ್ ಕಟ್ಟದ ಕಾರಣ, ಕರೆಂಟ್ ಸ್ಥಗಿತವೂ ಮಾಡಲಾಗಿತ್ತು. ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಹಂಪಿ ವಿಶ್ವವಿದ್ಯಾಲಯ ಕರೆಂಟ್ ಬಿಲ್ ಮನ್ನಾ ಮಾಡುವಂತೆ ಸರ್ಕಾರಕ್ಕೆ ಪತ್ರವೂ ಸಹ ಬರೆಯಲಾಗಿತ್ತು, ಆದ್ರೂ ಯಾವುದೇ ಪ್ರಯೋಜನವಿಲ್ಲ, ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತಿಂಗಳಿಂದ, ತಿಂಗಳುಗಳ ಕಾಲ, ವಿದ್ಯುತ್ ಬಿಲ್ ಹೆಚ್ಚುತ್ತಲೇ ಇದೆ, ಆದ್ರೆ ಕಟ್ಟೋಕೆ ಮಾತ್ರ ರಾಜ್ಯ ಸರ್ಕಾರಿಂದ ಹಣವಿಲ್ಲ.
ಇದನ್ನೂ ಓದಿ : ಬಿಗ್ಬಾಸ್ ಸೀಸನ್-10ರಲ್ಲಿ ಬೆಂಕಿ ಬಂತೋ..ಯಾರು ಆ ಬೆಂಕಿ?