ರಾಯಚೂರು : ನಗರದಿಂದ ತಾಲೂಕಿನ ಆಶಾಪುರ ಗ್ರಾಮಕ್ಕೆ ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ.

ನಗರದ ಖಾಸಗಿ ಆಸ್ಪತ್ರೆಯಿಂದ ಮೃತದೇಹವನ್ನು ಕುಟುಂಬ ಸದಸ್ಯರು ಆಶಾಪುರ ಗ್ರಾಮಕ್ಕೆ ಸಾಗಿಸುತ್ತಿದ್ದಾಗ ಆಂಬುಲೆನ್ಸ್‌ನ ಇಂಜಿನ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಚಾಲಕನಿಗೆ ಕನ್ನಡಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಅಲರ್ಟ್ ಆಗಿ ವಾಹನ ನಿಲ್ಲಿಸಿದ್ದಾನೆ.
ಬಳಿಕ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾನೆ. ಆಂಬ್ಯುಲೆನ್ಸ್ನಲ್ಲಿ ಮೃತದೇಹದ ಜೊತೆಗೆ ಮೂರು ಜನ ಕುಟುಂಬ ಸದಸ್ಯರು ಕೂತಿದ್ದರು. ಚಾಲಕ ಸೇರಿ ನಾಲ್ಕು ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Author: Btv Kannada
Post Views: 897









