ಚಿತ್ರದುರ್ಗ : ಚಿತ್ರದುರ್ಗದ ಬಿ.ಎಸ್ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ವೇದಿಕೆ ಬಳಿ ಯಡಿಯೂರಪ್ಪ ಅವರು ಬಳಸಿದ ಅಂಬಾಸಿಡರ್ ಕಾರನ್ನ ಪ್ರದರ್ಶನಕ್ಕೆ ಇಡಲಾಗಿದೆ. ಇನ್ನೂ ಜಿಲ್ಲೆಯ ಹೊರವಲಯದ ಮಾದಾರ ಚನ್ನಯ್ಯ ಮಠದ ಬಳಿ ನಾಳೆ ಬಿ ಎಸ್ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಆಗಮಿಸಲಿದ್ದು, ಈ ಹಿನ್ನೆಲೆ ಬಿ ಏಸ್ ಯಡಿಯೂರಪ್ಪ ರಾಜಕೀಯ ಪ್ರವೇಶದ ವೇಳೆ ಬಳಸಿದ್ದ ಹಾಗೂ ಆರಂಭದಲ್ಲಿ ರಾಜ್ಯಾದ್ಯಂತ ಓಡಾಟ ನಡೆಸಿ ಪಕ್ಷದ ಪ್ರಚಾರ ನಡೆಸಿದ್ದ ಅಂಬಾಸಿಡರ್ ಸಿ ಕೆ ಆರ್ 45 ನಂಬರಿನ ಕಾರನ್ನ ವೇದಿಕೆ ಮುಂಬಾಗದ ಬಳಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವೇಳೆ ಒಂದು ಕಾರನ್ನ ವೇದಿಕೆ ಬಳಿ ಪ್ರದರ್ಶನಕ್ಕೆ ಇರಿಸಿದ್ದು, ಸಾರ್ವಜನಿಕರು ಬಿ ಎಸ್ ಯಡಿಯೂರಪ್ಪ ಅವರ ಅಭಿಮಾನಿಗಳು ಸಹ ಈ ಒಂದು ಕಾರಿನ ಜೊತೆ ಸೆಲ್ಫಿ ಹಾಗೂ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದಾಗಿದೆ.

ಇನ್ನೂ ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸಹ ಕಾರನ್ನ ವೀಕ್ಷಣೆ ಮಾಡಿದ್ದಾರೆ. ನಂತರ ಬಿ ವೈ ವಿಜಯೇಂದ್ರ ಅವರು ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಳಸಿದ ಅಂಬಾಸಿಡರ್ ಕಾರಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬಂದ್ ಆಗಿದ್ದ ಪೀಣ್ಯ ಫ್ಲೈಓವರ್ ಓಪನ್ – ವಾಹನ ಸಂಚಾರ ಶುರು!








