ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಅನ್ಯಾಯ – ಹಿರಿಯ ವಕೀಲ ಎಸ್. ಬಾಲನ್ ಕಿಡಿ!

ಬೆಂಗಳೂರು : ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಇಂದು IFTU ರಾಜ್ಯ ಸಮಿತಿ ವತಿಯಿಂದ 140ನೇ ಕಾರ್ಮಿಕ ದಿನಾಚರಣೆ ಮತ್ತು ಜಾಗೃತಿ ಸಮಾವೇಶ ನಡೆಯಿತು. ಈ ವೇಳೆ ಹಿರಿಯ ವಕೀಲ ಎಸ್. ಬಾಲನ್ ಅವರು ಮಾತನಾಡಿ, ಬಿಸಿ ಊಟ, ಅಂಗನವಾಡಿ ಟೀಚರ್, ನರ್ಸ್​, ಕಟ್ಟಡ ಕಾರ್ಮಿಕರಿಗೆ ಕನಿಷ್ಠ ವೇತನ ಕೊಡಿ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ನಾಲಾಯಕ್ ಸರ್ಕಾರ, ಕಾರ್ಮಿಕರಿಗೆ ಮೋಸ ಅನ್ಯಾಯ ಮಾಡಿದೆ. ಈ ಅನ್ಯಾಯಕ್ಕೆ ವಿರೋಧವಾಗಿ ನಾವು ಇವತ್ತು ಧ್ವನಿ ಎತ್ತಿದ್ದೇವೆ. ಗುತ್ತಿಗೆ ಪದ್ಧತಿಯನ್ನು ಯಾರು ಕಂಡುಹಿಡಿದಿದ್ದು, ಅವರು ಸಿಕ್ಕಿದ್ರೆ ನಾನು ಬೂಟಲ್ಲೇ ಹೊಡಿತೇನೆ. ಕರ್ನಾಟಕದಲ್ಲಿ 1 ಲಕ್ಷದ 34 ಸಾವಿರ ಅಂಗನವಾಡಿ ಇದೆ. ಸಿದ್ದಣ್ಣ ಸಂಬಳ ಕೊಡಯ್ಯ ಅಂದ್ರೆ ಕೊಡ್ಬೇಕು, ಮೋದಿ ಸರ್ಕಾರ ಬಿಸಿ ಊಟದ ಟೀಚರ್​ಗೆ ತಿಂಗಳಿಗೆ 600 ರೂ. ಸಂಬಳ ಕೊಡೋದು ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಹಿರಿಯ ವಕೀಲ ಎಸ್. ಬಾಲನ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಅಂಗನವಾಡಿ ಟೀಚರ್​ಗೆ 4.600 ರೂ. ಸಂಬಳ ಕೊಡೋದು. ಶೋಭಾ ಕರಂದ್ಲಾಜೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾರಿಶಕ್ತಿ, ಸ್ರ್ರೀ ಶಕ್ತಿ ಅಂತಾರಲ್ಲಾ, ಅಂಗನವಾಡಿ ಟೀಚರ್​ಗೆ 4.600 ರೂ. ಸಂಬಳ ಫಿಕ್ಸ್​ ಮಾಡಿರೋದು ಯಾರು. ಮಧು ಬಂಗಾರಪ್ಪ ಅವರ ಒಂದು ಬಾರಿ ಹೇರ್​ ಕಟ್​ ಮಾಡೋ ಬಾರ್ಬರ್​ಗೆ 5000 ರೂ. ಸಂಬಳ. ದಿನದಲ್ಲಿ 9 ಗಂಟೆ ಕಾಲ ಕೆಲಸ ಮಾಡೋ ಬಿಸಿ ಊಟ, ಅಂಗನವಾಡಿ ಟೀಚರ್​ಗೆ 4.600 ರೂ. ಸಂಬಳ ಎಂದು ಕಿಡಿ ಕಾರಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಕಪ್​ಗೆ 15,000 ಸಂಬಳ, ಬಿಸಿ ಊಟದವ್ರು 3 ತಿಂಗಳು ಕೆಲಸ ಮಾಡಿ ಸಂಬಳ ತೆಗೊಂಡ್ರೆ ಒಂದು ಮೇಕಪ್​ಗೂ ಸಾಕಾಗೊಲ್ಲ. ಆದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಸಿ ಊಟ, ಅಂಗನವಾಡಿ ಟೀಚರ್​ಗೆ ಕೊಡೋ ಸಂಬಳ ಅಷ್ಟೇ. ಗುತ್ತಿಗೆ ಕಾರ್ಮಿಕರಿಗೆ ಡಿಎ ಕೊಡಿ ಅಂತ ಕೇಳಿದ್ಕೆ ಕೊಟ್ರು. ಆದ್ರೆ ಬಿಸಿ ಊಟ, ಅಂಗನವಾಡಿ ಟೀಚರ್​ಗೆ ಡಿಎ, ಬೋನಸ್ ಯಾವುದೂ ಇಲ್ಲ. ಹಾಗೆಯೇ ನರ್ಸ್​ಗಳಿಗೆ, 108 ಆಂಬುಲೆನ್ಸ್​​ ಸಿಬ್ಬಂದಿಗಳಿಗೂ ಡಿಎ ಇಲ್ಲ. ಇದು ಯಾವ ನ್ಯಾಯ ಎಂದು ಎಸ್. ಬಾಲನ್ ಕೆಂಡ ಕಾರಿದ್ದಾರೆ.

ಎಂಎಲ್​ಎ, ಎಂಪಿಗಳಿಗೆ ಸಂಬಳದ ಜೊತೆ ಗಿಂಬಲನೂ ಸಿಗುತ್ತೆ. ಆದ್ರೆ ಬಿಸಿ ಊಟ, ಅಂಗನವಾಡಿ ಟೀಚರ್ಸ್​ಗೆ ಕೊಡೋ ಸಂಬಳದಲ್ಲಿ ಹೇಗೆ ಜೀವನ ನಡೆಸೋಕೆ ಆಗುತ್ತೆ. ಸಿದ್ದರಾಮಯ್ಯ ಮಾತ್ರ 70 ಲಕ್ಷದ ವಾಚ್ ಕಟ್ಟಿಕೊಂಡಿದ್ದಾರೆ. ಬಿಸಿ ಊಟ, ಅಂಗನವಾಡಿ ಟೀಚರ್​ಗೆ 4.600 ರೂ. ಸಂಬಳ ಕೊಡ್ತಾರೆ. ನೀವು ಯಾಕೆ ಸಿಎಂ ಸೀಟಲ್ಲಿ ಕೂತಿದ್ದೀರ. ಕೇರಳದಲ್ಲಿ ಬಿಸಿ ಊಟದವ್ರಿಗೆ 12,000 ಕೊಡ್ತಾರೆ. ಆದ್ರೆ ನಾವು ಕನಿಷ್ಟ ವೇತನ ಕೊಡಿ ಅಂತ ಕೇಳ್ತಿದ್ದೇವೆ.

ಕೇಂದ್ರ ಸರ್ಕಾರದ ಬಜೆಟ್​ 53 ಲಕ್ಷ ಕೋಟಿ. ಅಂಗನವಾಡಿ, ಬಿಸಿ ಊಟಗೆ ಒಂದು ಗ್ರಾಂ ಹಲ್ವನೂ ಕೊಟ್ಟಿಲ್ಲ. ಗುತ್ತಿಗೆ ಕಾರ್ಮಿಕರಿಗೂ ಪ್ರಧಾನಿ ಮೋದಿ ಏನೂ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ಐಶಾರಾಮಿ ಜೀವನ ನಡೆಸ್ತಾರೆ. ಆದ್ರೆ ಬಿಸಿ ಊಟ, ಅಂಗನವಾಡಿ ಟೀಚರ್​ಗೆ ಕೊಡೋದು 4.600 ರೂ. ಸಂಬಳ. ಇದು ಯಾವ ನ್ಯಾಯ.. ಮಹಿಳೆಯರಿಗೆ ಕನಿಷ್ಟ ವೇತನ ಕೊಡೋಕೆ ಆಗ್ದೆ ಇರೋ ಮುಖ್ಯಮಂತ್ರಿ ಯಾಕೆ ಬೇಕು. ಕೂಲಿ ಕೊಡೋಕೆ ಯೋಗ್ಯತೆ ಇರದೇ ಇರೋ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಬೇಡ ಎಂದು ಹಿರಿಯ ವಕೀಲ ಎಸ್. ಬಾಲನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ – 24 ಮಂದಿ ಸಾವು!

Btv Kannada
Author: Btv Kannada

Leave a Comment

Read More

Read More