ತಿರುನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರೂ ಆಗಿರುವ ತಿರುವನಂಚೂರು ರಾಧಾಕೃಷ್ಣನ್ ಇಂದು ಕೇರಳದ 16ನೇ ವಿಧಾನಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಮತ ಚಲಾಯಿಸದ ಕಾರಣ ರಾಧಾಕೃಷ್ಣನ್ 101 ಮತಗಳನ್ನ ಪಡೆದು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದರು.
140 ಸದಸ್ಯರಲ್ಲಿ ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಚುನಾವಣಾ ಅಧಿಕಾರಿ ಆಗಿದ್ದ ಕಾರಣ ಮತದಾನದಿಂದ ದೂರ ಉಳಿದಿದ್ದರು. ಚಲಾವಣೆಯಾದ 139 ಮತಗಳಲ್ಲಿ, ಯುಡಿಎಫ್‌ನಿಂದ ಕಣಕ್ಕಿಳಿದ ರಾಧಾಕೃಷ್ಣನ್ 101 ಮತಗಳನ್ನು ಪಡೆದು ಸ್ಪೀಕರ್ ಆಗಿ ಆಯ್ಕೆಯಾದರು.
ಇದನ್ನೂ ಓದಿ : ಮೃತ್ಯುದೇವತೆ ಚಿತ್ರದ ‘ನಮ್ಮಾವ ಮಾದೇವ’ ಹಾಡು ಬಿಡುಗಡೆ!
Author: Btv Kannada
Post Views: 852








