ಬೆಂಗಳೂರು : ಶೆಡ್ಗೆ ಬೆಂಕಿ ಬಿದ್ದು ಎರಡು ಮಕ್ಕಳು ಸಜೀವ ದಹನವಾಗಿರುವ ಘಟನೆ ನಗರದ ಕೊತ್ತನೂರು ಬಳಿಯ ನಾರಾಯಣಪುರದಲ್ಲಿ ನಡೆದಿದೆ. ಅರ್ಜುನ್(5), ಆಶಾ(3) ಮೃತ ಮಕ್ಕಳು.

ಮೃತಪಟ್ಟ ಮಕ್ಕಳು ಮೂಲತಃ ರಾಯಚೂರಿನವರಾಗಿದ್ದು, ಅವರ ತಂದೆ-ತಾಯಿ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು.

ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಜ್ಜಿ ಶೆಡ್ನಿಂದ ಹೊರಗಡೆ ಹೋಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.
ಮಕ್ಕಳು ಶೆಡ್ನಲ್ಲೇ ಸಿಲುಕಿಕೊಂಡಿದ್ದರು. ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಂದು ಮಗು ಆಸ್ಪತ್ರೆಗೆ ಕೊಂಡೊಯ್ಯುವಾಗ ಕೊನೆಯುಸಿರೆಳೆದಿದೆ. ಘಟನಾ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ PWD ಇಲಾಖೆ ಇಂಜಿನಿಯರ್ ಆತ್ಮಹತ್ಯೆ!
Author: Btv Kannada
Post Views: 566









